ನೇಣುಬಿಗಿದು ಮಹಿಳೆ ಆತ್ಮಹತ್ಯೆ
Update: 2016-04-28 23:54 IST
ಬೆಳ್ತಂಗಡಿ, ಎ.28: ತೋಟತ್ತಾಡಿ ದರ್ಕಾಸು ನಿವಾಸಿ ವಿಜಯ ಮಡಿವಾಳ ಎಂಬವರ ಪತ್ನಿ ಪದ್ಮಾವತಿ (36) ಎಂಬವರು ಮನೆಯಲ್ಲಿ ಗುರುವಾರ ಸಂಜೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಮಹಿಳೆಗೆ ಒಂದುವರೆ ತಿಂಗಳ ಮಗು ಸಹಿತ ನಾಲ್ವರು ಮಕ್ಕಳಿದ್ದಾರೆ. ಇವರು ಹಿಂದೆ ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದು ಬಂದಿದೆ. ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ಪದ್ಮಾವತಿ ಗುರುವಾರ ಸಂಬಂಧಿಕರ ಗೃಹಪ್ರವೇಶಕ್ಕೆಂದು ಮನೆಯವರು ಹೋಗಿದ್ದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ ಠಾಣೆಯಎಸೈ ಮಾಧವ ಕೂಡ್ಲು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.