ಅಸೈಗೋಳಿಯಲ್ಲಿ ಪವಿತ್ರ ಸಂಕಲ್ಪದ ವರ್ಷಾಚರಣೆ

Update: 2016-04-29 11:49 GMT

ಕೊಣಾಜೆ, ಎ.29: ಅಸೈಗೋಳಿಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಅಯ್ಯಪ್ಪಸ್ವಾಮಿ ಮಂದಿ ಶಿಲಾನ್ಯಾಸಗೊಂಡು ಒಂದು ಸಂವತ್ಸರ ಪೂರೈಸಿದ ಹಿನ್ನೆಲೆಯಲ್ಲಿ ಪವಿತ್ರ ಸಂಕಲ್ಪದ ವರ್ಷಾಚರಣೆಯನ್ನು ಅಯ್ಯಪ್ಪಸ್ವಾಮಿ ಮಂದಿರದಲ್ಲಿ ಬುಧವಾರ ಆಚರಿಸಲಾಯಿತು.

ಧಾರ್ಮಿಕ ಸಭೆಯನ್ನು ಶ್ರೀ ಮಲರಾಯ ಧೂಮವತಿ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಬಾಬು ಶ್ರೀಶಾಸ್ತ ಕಿನ್ಯ ಉದ್ಘಾಟಿಸಿದರು. ದೈವ-ದೇವಸ್ಥಾನಗಳು, ಮಠ-ಮಂದಿರಗಳು ಭಕ್ತರ ನೆಮ್ಮದಿಯ ಕೇಂದ್ರವಾಗಿದ್ದು, ಇವುಗಳನ್ನು ಉಳಿಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬರಿಂದಲೂ ಆಗಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸೀತಾರಾಮ ಶೆಟ್ಟಿ ದಡಸು ಮಾತನಾಡಿ, ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ಮಂದಿರ ನಿರ್ಮಾಣವಾಗುತ್ತಿದ್ದು ಊರ ಮತ್ತು ಪರವೂರ ಭಕ್ತರು ಉತ್ತಮ ರೀತಿಯಲ್ಲಿ ಸಹಕಾರ ಮಾಡುತ್ತಿದ್ದಾರೆ. ಇನ್ನಷ್ಟು ದಾನಿಗಳು ಮನಸ್ಸು ಮಾಡಿದರೆ ಇನ್ನೊಂದು ವರ್ಷದಲ್ಲಿ ಜೀರ್ಣೋದ್ಧಾರ ಕಾರ್ಯ ಪೂರ್ತಿಗೊಳಿಸಲು ಸಾಧ್ಯವಾಗಿದೆ ಎಂದರು.

  ಮಾಜಿ ಶಾಸಕ ಜಯರಾಮ ಶೆಟ್ಟಿ, ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಗುರುಸ್ವಾಮಿ ವಿಶ್ವನಾಥ ಕಾಯರ್ ಪಳಿಕೆ, ಉಪ್ಪಳ ಶ್ರೀ ಅಯ್ಯಪ್ಪಸ್ವಾಮಿ ಮಂದಿರದ ಅಧ್ಯಕ್ಷ ಸತೀಶ್ಚಂದ್ರ ಶೆಟ್ಟಿ, ಮಂಜುನಾಥ ಆಳ್ವ ತೇವುನಾಡುಗುತ್ತು, ಹರೇಕಳ ರಾಮಕೃಷ್ಣ ಪ್ರೌಢಶಾಲೆ ಮುಖ್ಯ ಶಿಕ್ಷಕ ರವೀಂದ್ರ ರೈ, ಅಸೈಗೋಳಿ ಶ್ರೀ ಗುಳಿಗ ಕೊರಗಜ್ಜ ಸೇವಾ ಸಮಿತಿಯ ಆಡಳಿತ ಮೊಕ್ತೇಸರ ಸಂಕಪ್ಪ ಕರ್ಕೇರ, ರವೀಂದ್ರ ಬಂಗೇರ ಕೊಣಾಜೆ, ಸುರೇಶ್ ಚೌಟ ಕಕ್ಕೆಮಜಲು, ಪ್ರಶಾಂತ್ ಕಾಜವ ಮಿತ್ತಕೋಡಿ ಮೊದಲಾದವರು ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಸಮಿತಿ ಸಂಚಾಲಕ ಶ್ರೀನಿವಾಸ ಶೆಟ್ಟಿ ಪುಲ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಪದಾಧಿಕಾರಿ ಆನಂದ ಕೆ.ಅಸೈಗೋಳಿ ಸ್ವಾಗತಿಸಿದರು. ರಾಮಕೃಷ್ಣ ಪಟ್ಟೋರಿ ವಂದಿಸಿದರು. ರವಿಶಂಕರ್ ಪ್ರಾರ್ಥಿಸಿದರು. ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News