×
Ad

ಕಾರು ಚಾಲಕನಿಗೆ ಹಲ್ಲೆ ಪ್ರಕರಣ: ಆರೋಪಿಗಳಿಗೆ ಜಾಮೀನು

Update: 2016-04-29 17:33 IST

ಉಪ್ಪಿನಂಗಡಿ, ಎ.29: ಅಪಘಾತ ನಡೆದ ಬಳಿಕ ಕಾರು ಚಾಲಕನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಆರೋಪಿಗಳಿಗೆ ಶುಕ್ರವಾರ ನ್ಯಾಯಾಲಯ ಜಾಮೀನು ನೀಡಿದೆ.

ಉಪ್ಪಿನಂಗಡಿ- ಕಡಬ ರಾಜ್ಯ ಹೆದ್ದಾರಿಯ ಆಲಂಕಾರು ಗ್ರಾಮದ ನೆಕ್ಕರೆ ಎಂಬಲ್ಲಿ ಬಜತ್ತೂರು ಗ್ರಾಮದ ಕಾಂಚನ ಬರಮೇಲು ನಿವಾಸಿ ಶ್ರೀಧರ ಪೂಜಾರಿ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಆಕ್ಟೀವಾ ಹೋಂಡಾಕ್ಕೆ ಉಳ್ಳಾಲ ನಿವಾಸಿ ನಿಜಾಮುದ್ದೀನ್ ಚಲಾಯಿಸಿಕೊಂಡು ಬಂದ ಇನೋವಾ ಕಾರು ಢಿಕ್ಕಿಯಾಗಿತ್ತು.

 ಕಾರು ಚಾಲಕ ಓವರ್‌ಟೇಕ್ ಮಾಡಲು ಹೋಗಿ ಈ ಅಪಘಾತ ಸಂಭವಿಸಿತ್ತು ಎನ್ನಲಾಗಿತ್ತು. ಘಟನೆಯಿಂದ ದ್ವಿಚಕ್ರ ವಾಹನದಲ್ಲಿದ ್ದ ಶ್ರೀಧರ ಪೂಜಾರಿ ಹಾಗೂ ಸಹಸವಾರ ಕೊರಗಪ್ಪ ಗೌಡ ಗಂಭೀರ ಗಾಯಗೊಂಡಿದ್ದರು. ಈ ಸಂದಭರ್ ಕಾರು ಚಾಲಕನಿಗೆ ಅಮೈ ದಯಾನಂದ, ದಾಮೋದರ, ಭಾಸ್ಕರ ಗೌಡ, ಜಯ ನೆಕ್ಕಿಲಾಡಿ, ಯಶವಂತ, ಪುಟ್ಟ, ಮನೋಹರ್, ಮಲ್ಲೇಶ, ಹರೀಶ್ ಪೂಜಾರಿ, ಜಯಕರ ಆಲಂಕಾರು ಎಂಬವರು ಹಲ್ಲೆ ನಡೆಸಿದ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ ಪುತ್ತೂರು ಜೆಎಂಎಫ್‌ಸಿ ನ್ಯಾಯಾಲಯ ಈ ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ 10 ಆರೋಪಿಗಳಿಗೆ ಜಾಮೀನು ನೀಡಿ ತೀರ್ಪು ನೀಡಿದೆ.

ಆರೋಪಿಗಳ ಪರವಾಗಿ ನ್ಯಾಯವಾದಿಗಳಾದ ಉದಯಶಂಕರ್ ಶೆಟ್ಟಿ, ಮಾಧವ ಪೂಜಾರಿ, ಅನಿಲ್ ಕುಮಾರ್ ಉಪ್ಪಿನಂಗಡಿ ಹಾಗೂ ಸಂದೇಶ್ ನಟ್ಟಿಬೈಲ್ ವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News