×
Ad

ತೊಕ್ಕೊಟ್ಟಿನಲ್ಲಿ ಯುವಕನಿಗೆ ಚೂರಿ ಇರಿತ

Update: 2016-04-29 19:50 IST

ಮಂಗಳೂರು,ಎ.29: ಚಿಟ್ ಫಂಡ್ ಕಲೆಕ್ಷನ್‌ಗೆಂದು ಹೊರಟಿದ್ದ ಯುವಕನೋರ್ವನಿಗೆ ಗುಂಪೊಂದು ಚೂರಿ ಇರಿದ ಘಟನೆ ಇಂದು ಸಂಜೆ ತೊಕ್ಕೊಟ್ಟು ಬಳಿ ನಡೆದಿದೆ.
ತೊಕ್ಕೊಟ್ಟು ಚರ್ಚ್ ರಸ್ತೆಯ ಅಕ್ಕರೆಕೆರೆ ನಿವಾಸಿ ದಾಮೋದರ್ ಗಾಣಿಗ ಎಂಬವರ ಪುತ್ರ ಧನರಾಜ್(23)ದುಷ್ಕರ್ಮಿಗಳಿಂದ ಚೂರಿ ಇರಿತಕ್ಕೊಳಗಾದ ಯುವಕ. ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಧನರಾಜ್ ಚಿಟ್ ಫಂಡ್ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದು, ಶುಕ್ರವಾರ ಸಂಜೆ ಸುಮಾರು 4:30ರ ವೇಗೆೆ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಹೊರಟಿದ್ದಾಗ ಟಿ.ಸಿ ರೋಡ್ ಬಳಿ ಸುಮಾರು 4 ಮಂದಿಯ ತಂಡ ಧನರಾಜ್‌ರನ್ನು ಅಡ್ಡಗಟ್ಟಿ ಚೂರಿಯಿಂದ ಇರಿದಿದೆ ಎಂದು ಹೇಳಲಾಗಿದೆ.
ಪರಿಣಾಮವಾಗಿ ಧನರಾಜ್‌ರ ಬಲಭುಜಕ್ಕೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News