×
Ad

ಬಿಜೆಪಿ ಅಭ್ಯರ್ಥಿ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಆಸ್ತಿ ಘೋಷಣೆ

Update: 2016-04-29 21:44 IST

ತಿರುವನಂತಪುರಂ, ಎ.29: ಕೇರಳ ವಿಧಾನಸಭೆ ಚುನಾವಣೆಯಲ್ಲಿ ತಿರುವನಂತಪುರಂ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಾಜಿ ಕ್ರಿಕೆಟಿಗ ಎಸ್ .ಶ್ರೀಶಾಂತ್ 7.37 ಕೋಟಿ ರೂ.ವೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

      ಮೇ 16 ರಂದು ಕೇರಳ ವಿಧಾನಸಭೆ ಚುನಾವಣಾ ಕಣದಲ್ಲಿ ಮೊದಲನೇ ಬಾರಿ ಗೆಲ್ಲಲು ಹಪಹಪಿಸುತ್ತಿರುವ 33 ವರ್ಷದ ವೇಗಿ ಬೌಲರ್ ಶ್ರೀಶಾಂತ್ ತನ್ನ ನಾಮಪತ್ರದ ಜೊತೆ ಸಲ್ಲಿಸಿದ ಅಫಿದವಿತ್‌ನಲ್ಲಿ 42,500 ಕೈಯಲ್ಲಿ ನಗದು ಹಾಗೂ ಪತ್ನಿ ಬಳಿ 35,000 ರೂ.ನಗದು ಇದೆಯೆಂದು ಘೋಷಿಸಿಕೊಂಡಿದ್ದಾರೆ.

        ಕ್ರಿಕೆಟ್ ಪಂದ್ಯಾಟದ ಪಂದ್ಯ ಶ್ರೇಷ್ಠ ಪ್ರಶಸ್ತಿಯಲ್ಲಿ ದೊರಕಿದ 30,000 ಸಾವಿರ ವೌಲ್ಯದ ಮೋಟಾರು ದ್ವಿ ಚಕ್ರ ವಾಹನ ಹಾಗೂ 1.18 ಕೋಟಿ ರೂ.ವೌಲ್ಯದ ಜಗ್ವಾರ್ ಎಕ್ಸ್‌ಜೆಎಲ್ ಕಾರು ಸೇರಿದಂತೆ ಚರಾಸ್ತಿ ಇದೆಯೆಂದು ಅಫಿದವಿತ್‌ನಲ್ಲಿ ಘೋಷಿಸಿಕೊಂಡಿದ್ದು .ಜೊತೆಗೆ ವಿಶ್ವಕಪ್‌ನಲ್ಲಿ ದೊರಕಿದ ವಜ್ರದ ಮತ್ತು 55ಕ್ಕಿಂತ ಹೆಚ್ಚು ಚಿನ್ನದ ಪವನ್ ಸೇರಿ 3,00,000 ರೂ. ಮತ್ತು 5,00,000 ವೌಲ್ಯದ ಚರಾಸ್ತಿಯೆಂದು ಅಫಿದವಿತ್‌ನಲ್ಲಿ ಉಲ್ಲೇಖಿಸಿದ್ದಾರೆ.

    ಶ್ರೀಶಾಂತ್ ಪತ್ನಿ ಬಳಿ 82 ಲಕ್ಷ ರೂ. ವೌಲ್ಯದ 375 ಪವನ್ ಚಿನ್ನ ಇದೆ ಎಂದು ಅಫಿದವಿತ್‌ನಲ್ಲಿ ತಿಳಿಸಲಾಗಿದೆ.

     ಕೊಚ್ಚಿ ಎಡಪಲ್ಲಿಯಲ್ಲಿ ವಿಶಾಲವಾದ 9000 ಚದರ ಅಡಿಯಲ್ಲಿ ನಿರ್ಮಿಣಗೊಳ್ಳುತ್ತಿರುವ ರೂ 5.5 ಕೋಟಿ ವೌಲ್ಯದ ಮನೆ ಸೇರಿದಂತೆ 5.26 ಎಕ್ರೆ ಸ್ಥಿರಾಸ್ತಿ ಹೊಂದಿದ್ದಾರೆ ಎಂದು ಅಫಿದವಿತ್‌ನಲ್ಲಿ ಘೋಷಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News