ನಾಳೆ ನಗರದಲ್ಲಿ ‘ವಿ.ಕೆ. ಲಿವಿಂಗ್ ಕಾನ್ಸೆಪ್ಟ್’ ಸೋಫಾ ಶೋರೂಮ್ ಉದ್ಘಾಟನೆ
ಮಂಗಳೂರು, ಎ.29: ಕಳೆದ 15 ವರ್ಷಗಳಿಂದ ಸೋಫಾ ತಯಾರಿಕೆಯ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ‘ವಿ.ಕೆ.ಸೋಫಾ ಮೇಕರ್ಸ್’ನ ಹೊಸ ಶೋರೂಮ್ ‘ವಿ.ಕೆ. ಲಿವಿಂಗ್ ಕಾನ್ಸೆಪ್ಟ್’ ನಗರದ ಉರ್ವ ಚಿಲಿಂಬಿ ಸಮೀಪದ ಸಾಯಿ ಬಾಬಾ ಮಂದಿರ ಬಳಿಯ ಬೆನ್ಲಿನ್ ಕಟ್ಟಡದಲ್ಲಿ ಮೇ 1ರಂದು ಬೆಳಗ್ಗೆ 9:30ಕ್ಕೆ ಮೇಯರ್ ಹರಿನಾಥ್‌ರಿಂದ ಉದ್ಘಾಟನೆಗೊಳ್ಳಲಿದೆ.
ವಿಠಲ್ ಕುಲಾಲ್‌ರ ಕನಸಿನ ಕೂಸಾದ ‘ವಿ.ಕೆ. ಲಿವಿಂಗ್ ಕಾನ್ಸೆಪ್ಟ್’ ಶೋರೂಮ್‌ನಲ್ಲಿ ಉತ್ತಮ ಗುಣಮಟ್ಟದ ಸೋಫಾ, ಇಂಟೀರಿಯರ್ಸ್ ಮತ್ತು ಮೊಡ್ಯುಲರ್ ಕಿಚನ್‌ಗಳನ್ನು ತನ್ನದೇ ಆದ ಫ್ಯಾಕ್ಟರಿಯಲ್ಲಿ ತಯಾರಿಸಿ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ತಲುಪಿಸುವ ಉದ್ದೇಶವನ್ನು ಹೊಂದಿದೆ.
ವಿ.ಕೆ. ಸೋಫಾ ಮೇಕರ್ಸ್ ಸೋಫಾ ತಯಾರಿಕಾ ಸಂಸ್ಥೆಯು ಹಲವು ರೀತಿಯ ಸೋಫಾ ತಯಾರಿಕೆಯಲ್ಲಿ ಪರಿಣತಿಯನ್ನು ಹೊಂದಿದೆ. ಎಲ್ಲ ಸೋಫಾಗಳು ದಕ್ಷಿಣ ಭಾರತದ ಪ್ರಮುಖ ಕಾರ್ಖಾನೆಯಲ್ಲಿ ನೈಪುಣ್ಯ ಹೊಂದಿರುವ ಕರಕುಶಲಗಾರರ ತಂಡದಿಂದ ತಯಾರಿಸಲ್ಪಡುತ್ತದೆ. ಗ್ರಾಹಕರಿಗೆ ನೇರವಾಗಿ ಉತ್ಪನ್ನಗಳು ತಲುಪುವುದರಿಂದ ಯಾವುದೇ ರೀತಿಯ ಹೆಚ್ಚುವರಿ ಶುಲ್ಕವಿಲ್ಲದೆ ಸಮಂಜಸ ಬೆಲೆಯಲ್ಲಿ ನೀಡುವ ಕೀರ್ತಿಯನ್ನು ಸಂಸ್ಥೆಯು ಹೊಂದಿವೆ.
ದೇಶಾದ್ಯಂತ ಸಿಗುವ ಅತ್ಯುತ್ತಮ ಕಚ್ಛಾ ವಸ್ತುಗಳಿಂದ ನಿರ್ಮಿಸಲ್ಪಟ್ಟ ಸೋಫಾಗಳು ದೀರ್ಘಕಾಲ ಬಾಳ್ವಿಕೆಯನ್ನು ಹೊಂದಿರುತ್ತದೆ.
ಶೋರೂಮ್‌ನ ಉದ್ಘಾಟನಾ ಸಮಾರಂಭದ ಪ್ರಯುಕ್ತ ಉತ್ತಮ ಕೊಡುಗೆಗಳು ಲಭ್ಯವಿದೆ. ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಪ್ರವರ್ತಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗೆ ಡಿಡಿಡಿ.ಜ್ಟಟ್ಠ.್ಚಟಞ ಅಥವಾ ಜ್ಞ್ಛಿಟಃಟ್ಛಞಛ್ಟಿ.್ಚಟಞ ಸಂಪರ್ಕಿಸಬಹುದು.