ಸಾಮೂಹಿಕ ವಿವಾಹಗಳ ಬಗ್ಗೆ ಚಿಂತನೆ ನಡೆಯಬೇಕು: ಮೂಡಬಿದಿರೆ ಉದ್ಯಮಿ ನಾರಾಯಣ ಪಿ. ಎಂ
ಕಟೀಲು, ಎ.30: ಹೆತ್ತವರು ಹಾಗೂ ಯುವ ಸಮಾಜದಲ್ಲಿ ಉಚಿತ ಸಾಮೂಹಿಕ ವಿವಾಹಗಳ ಬಗ್ಗೆ ಇರುವ ಕೀಳರಿಮೆ ಹೋಗಲಾಡಿಸಿ ಸಾಮೂಹಿಕ ವಿವಾಹಗಳ ಬಗ್ಗೆ ಚಿಂತನೆ ನಡೆಯುಂತಾಗಬೇಕು ಎಂದು ಮೂಡಬಿದಿರೆ ಉದ್ಯಮಿ ನಾರಾಯಣ ಪಿ. ಎಂ. ಅಭಿಪ್ರಾಯಿಸಿದರು.
ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಹಾಗೂ ಕೆ. ಲಕ್ಷ್ಮೀ ನಾರಾಯಣ ಆಸ್ರಣ್ಣ ಅಭಿನಂದನಾ ಸಮಿತಿ ಕಟೀಲು ಆಶ್ರಯದಲ್ಲಿ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ನಡೆದ 8ನೆ ವರ್ಷದ ಸಾಮೂಹಿಕ ವಿವಾಹ ಸಮಾರಂಭದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಸುಲೋಚನಾ ಪದ್ಮಶಾಲಿ ಮುಂಬೈ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಒಟ್ಟು 7 ಜೋಡಿಗಳಿಗೆ ಮದುವೆ ನಡೆಯಿತು. ಮುಂಬೈ ಉದ್ಯಮಿ ಐಕಳ ಗುಣಪಾಲ ಶೆಟ್ಟಿ, ಮುಂಬೈ ಉದ್ಯಮಿ ಕೇಶವ ಅಂಚನ್, ಮೈಸೂರು ಸೆಂಟ್ರಲ್ ಇನ್ನರ್‌ವೀಲ್ ಚಂದ್ರಿಕಾ ಸುಧೀರ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಮೂಡಬಿದಿರೆ ಉದ್ಯಮಿ ಶ್ರೀಪತಿ ಭಟ್, ಯುಗಪುರುಷದ ಸಂಪಾದಕ ಭುವನಾಭಿರಾು ಉಡುಪ, ಗೋಪಾಲಕೃಷ್ಣ ಆಸ್ರಣ್ಣ,ಸಂಘಟಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ, ದೇವಪ್ರಸಾದ್ ಪುನರೂರು, ಮೋಹನ್ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.