×
Ad

ಪಾನ ನಿರೋಧವಿರುವ ಬಿಹಾರಿಗರಿಂದ ಮದ್ಯ ಖರೀದಿ!:

Update: 2016-04-30 14:52 IST

ಬಲಿಯಾ, ಎಪ್ರಿಲ್ 30: ಮದ್ಯದಂಗಡಿಯ ಸೇಲ್ಸ್‌ಮೆನ್ ಹಣೆಯ ಬೆವರೊರೆಸುತ್ತಿದ್ದಾನೆ. ಗಿರಾಕಿಗಳಿಗೆ ಮದ್ಯಕೊಟ್ಟೂ ಕೊಟ್ಟೂ ಆತ ಸುಸ್ತಾಗಿದ್ದಾನೆ.ಆದರೂ ಜನರ ಕ್ಯೂ ಬೆಳೆಯುತ್ತಲೇ ಇದೆ. ಈ ದೃಶ್ಯ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ಭರೌಲಿಯ ಸಾಮಾನ್ಯವಾಗಿದೆ ಎಂದು ವರದಿಗಳು ತಿಳಿಸಿವೆ. ಬಿಹಾರದಲ್ಲಿ ಮದ್ಯವೇನೋ ನಿಷೇಧವಾಗಿದೆ. ಆದರೆ ಉತ್ತರ ಗಡಿಗೆ ಸಮೀಪದ ಬಿಹಾರಿಗಳು ಉತ್ತರ ಪ್ರದೇಶದ ಮದ್ಯದಂಗಡಿಗೆ ಮದ್ಯ ಖರೀದಿಸಲು ಇರುವೆಯಂತೆ ಮುತ್ತಿಗೆ ಹಾಕುತ್ತಿದ್ದಾರೆ.ಟೈಮ್ಸ್ ಆಫ್ ಇಂಡಿಯ ವರದಿ ಪ್ರಕಾರ ಬಿಹಾರದ ಬಕ್ಸರ್ ಜಿಲ್ಲೆಯ ಬಹಳಷ್ಟು ಮಂದಿ ಶರಾಬು ಖರೀದಿಸಲಿಕ್ಕಾಗಿ ಇಲ್ಲಿನ ಮದ್ಯದಂಗಡಿಗೆ ಬರುತ್ತಿದ್ದಾರೆ. ಅಂಗಡಿಯೊಬ್ಬ ಬಿಹಾರದಲ್ಲಿ ಮದ್ಯ ನಿಷೇಧ ಆಗುವವರೆಗೂ ಅಂಗಡಿಯ ಲೈಸೆನ್ಸ್ ಫೀಸು ಮತ್ತು ಇತರ ಖರ್ಚಿಗಾಗಿ ಹೆಣಗಾಡುತ್ತಿದ್ದೆ. ಬಿಹಾರದಲ್ಲಿ ಮದ್ಯ ಬಂದ್ ಆದ್ದರಿಂದ ಪರಿಸ್ಥಿತಿಯೇ ಬದಲಾಗಿದೆ ಎಂದು ಹೇಳಿಕೊಂಡಿದ್ದಾನೆ. ಭರೌಲಿಯಲ್ಲಿ ಶರಾಬು ಭಾರೀ ಶರಾಬು ಮಾರಾಟ ನಡೆಯುತ್ತಿದೆ. ಇಲ್ಲಿನ ಶರಾಬು ಅಂಗಡಿಯ ಮುಂದೆ ವಿವಿಧ ವಯಸ್ಸಿನ ಜನರು ಎಲ್ಲ ಸಮಯದಲ್ಲಿಯೂ ಕ್ಯೂ ನಿಂತಿರುವುದನ್ನು ಕಾಣಬಹುದಾಗಿದೆ. ಇವರಲ್ಲಿ ಹೆಚ್ಚಿನವರು ಬಿಹಾರದ ಬಸ್ತರ್ ಜಿಲ್ಲೆಯಿಂದ ಬಂದವರೆಂದು ವರದಿಗಳು ತಿಳಿಸಿವೆ. ಇನ್ನು ಬಿಹಾರದ ಕೈಮೂರ್ ಜಿಲೆಯ ದುರ್ಗಾವತಿ ಪ್ರದೇಶದ ಜನರು ದೋಣಿಯಲ್ಲಿ ಕರ್ಮನಾಸಾ ನದಿ ದಾಟಿ ಮದ್ಯ ಖರೀದಿಸಲು ಬರುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News