×
Ad

ಈ ಕಲಿಯುಗದ ಕಮ್ಯುನಿಸ್ಟ್ ಕೇರಳದ ಅತ್ಯಂತ ಶ್ರೀಮಂತ ಅಭ್ಯರ್ಥಿ !

Update: 2016-04-30 14:54 IST

ತಿರುವನಂತಪುರಂ, ಎ. 30 : ಕೇರಳದ ಅಸೆಂಬ್ಲಿ ಚುನಾವಣೆಗಳು ಮೇ 16ರಂದು ನಡೆಯಲಿದ್ದು ಕಣದಲ್ಲಿರುವ ಸ್ಪರ್ಧಾಳುಗಳಲ್ಲಿ ರೂ. 92.37 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಕುಟ್ಟನಾಡು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಎಲ್ ಡಿ ಎಫ್ ಅಭ್ಯರ್ಥಿ ಥಾಮಸ್ ಚಾಂಡಿ ಅತ್ಯಂತ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ.

ಅವರ ಚರಾಸ್ಥಿಗಳ ಮೌಲ್ಯ ಹೊರತು ಪಡಿಸಿ ಕಳೆದ ಚುನಾವಣೆ ವೇಳೆ ಅವರ ಒಟ್ಟು ಆಸ್ತಿಮೌಲ್ಯ ರೂ 39.71 ಕೋಟಿಯಷ್ಟಿತ್ತು.

ಚಾಂಡಿಯವರು ಹಲವು ಬ್ಯಾಂಕುಗಳಲ್ಲಿ ರೂ 11.08,932 ಠೇವಣಿ ಹೊಂದಿದ್ದರೆ, ಅವರ ಪತ್ನಿಯ ಹೆಸರಿನಲ್ಲಿ ರೂ. 16,24,50,551 ಠೇವಣಿಯಿದೆ. ಇದರ ಹೊರತಾಗಿ ಅವರಲ್ಲಿ ರೂ 4,53,30,000 ಮೌಲ್ಯದ ಮ್ಯೂಚುವಲ್ ಫಂಡ್ ಹಾಗೂ ಷೇರುಗಳಿವೆ. ಚಾಂಡಿ ಹಾಗೂ ಅವರ ಪತ್ನಿಯ ಬಳಿ ಕ್ರಮವಾಗಿ ಒಟ್ಟುರೂ 38,45,000 ಹಾಗೂ ರೂ 22,25,011 ಮೌಲ್ಯದ ವಿಮಾ ಪಾಲಿಸಿಗಳಿದ್ದು ಅವರ ಅವಲಂಬಿತರಲ್ಲಿ ರೂ. 14,92,044 ಮೌಲ್ಯದ ವಿಮಾ ಪಾಲಿಸಿಗಳಿವೆ.

ಚಾಂಡಿ ಬಳಿ ರೂ. 1,45,20,000 ಮೌಲ್ಯದ ಎರಡು ಐಷಾರಾಮಿ ಕಾರುಗಳು, ಎರಡು ಹೌಸ್ ಬೋಟುಗಳು, ಮೂರು ಮೋಟಾರ್ ಬೋಟುಗಳಿದ್ದು ಅವರ ಪತ್ನಿರೂ 5.6 ಲಕ್ಷ ಮೌಲ್ಯದ ಮೊಟಾರ್ ಬೋಟ್ ಹೊಂದಿದ್ದಾರೆ. ಚಾಂಡಿ 100 ಗ್ರಾಂ ತೂಕದ ಆಭರಣಗಳನ್ನು ಹೊಂದಿದ್ದರೆ ಅವರ ಪತ್ನಿ ಬಳಿ 1 ಕೆಜಿ ತೂಕದ ರೂ 11 ಲಕ್ಷ ಬೆಲೆಬಾಳುವ ಆಭರಣಗಳಿವೆ.

ಚಾಂಡಿ ರೂ 65,0,65,427 ಮೌಲ್ಯದ ಚರಾಸ್ಥಿ ಹೊಂದಿದ್ದು ಅವರ ಪತ್ನಿ ಹಾಗೂ ಅವಲಂಬಿತರ ಬಳಿ ಒಟ್ಟು ರೂ 17,85,00,562 ಹಾಗೂ ರೂ. 15,02,044 ಮೌಲ್ಯದ ಚರಾಸ್ಥಿಗಳಿದ್ದು ಅವರ ಒಟ್ಟು ಸ್ಥಿರಾಸ್ಥಿ ಬೆಲೆ ರೂ 8,56,92,000 ಆಗಿದೆ.
ಚಾಂಡಿ ಘೋಷಿಸಿದ ತನ್ನ ಆಸ್ತಿ ಪ್ರಮಾಣ ಪತ್ರದಲ್ಲಿ ಅವರು ಯಾವುದೇ ಸಾಲ ಪಡೆದಿಲ್ಲವೆಂದು ಹೇಳಲಾಗಿದೆ. ಅವರು ತಮ್ಮ ಆಸ್ತಿ ಘೋಷಣೆ ಬಗ್ಗೆ ಅಫಿಡವಿಟ್ ಬುಧವಾರ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News