ಮೇ2ರಿಂದ ಅಡ್ಡಹೊಳೆ ಚರ್ಚ್ ಶುದ್ಧೀಕರಣ
Update: 2016-04-30 17:12 IST
ಮಂಗಳೂರು,ಎ.30: ಪುತ್ತೂರು ತಾಲೂಕಿನ ಶಿರಾಡಿ ಸಮೀಪದ ಅಡ್ಡಹೊಳೆ ಸಂತ ಜಾರ್ಜ್ ಜಾಕೋಬೈಟ್ ಸಿರಿಯನ್ ನವೀಕೃತ ಚರ್ಚ್‌ನ ಶುದ್ಧೀಕರಣ ಹಾಗೂ ಸಂತ ಜಾರ್ಜರ ಸ್ಮರಣೆ ಹಬ್ಬ ಮೇ 2ಮತ್ತು 3ರಂದು ನಡೆಯಲಿದೆ.
ಈ ಪ್ರಯುಕ್ತ ಮೇ 2ರಂದು ಸಂಜೆ 4ರಿಂದ ನೆಲ್ಯಾಡಿಯಿಂದ ವಾಹನ ರ್ಯಾಲಿ ಹಾಗೂ 5ಗಂಟೆಗೆ ವರ್ಣರಂಜಿತ ಮೆರವಣಿಗೆ ಹೊರಡಲಿದೆ. ಬಳಿಕ ಚರ್ಚ್ ಉದ್ಘಾಟನೆ, ಸಾರ್ವಜನಿಕ ಸಮ್ಮೇಳನ ನಡೆಯಲಿದೆ. ಹಬ್ಬದ ವಿಶೇಷ ಆಕರ್ಷಣೆಯಾಗಿ ಮೇ 3ರಂದು ಬೆಳಗ್ಗೆ 9:30ಕ್ಕೆ ಮೂವರು ಬಿಷಪ್‌ಗಳಿಂದ ದಿವ್ಯ ಬಲಿಪೂಜೆ ನಡೆಯಲಿದೆ. ನೀಲೇಶ್ವರಂ ಬಳಗದವರಿಂದ ಸಿಂಗಾರಿ ಮೇಳ ಏರ್ಪಡಿಸಲಾಗಿದೆ. ಸಾರ್ವಜನಿಕ ಸಮ್ಮೇಳನದಲ್ಲಿ ಧಾರ್ಮಿಕ ಮುಖಂಡರು, ಸಚಿವರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.