ಕೆನ್ಯ: ಆನೆ ದಂತಗಳ ಬೃಹತ್ ಸಂಗ್ರಹಕ್ಕೆ ಬೆಂಕಿ

Update: 2016-04-30 14:07 GMT

ನೈರೋಬಿ, ಎ. 30: ಆನೆಯ ದಂತಗಳ 11 ಬೃಹತ್ ರಾಶಿಗಳಿಗೆ ಕೆನ್ಯ ಇಂದು ಬೆಂಕಿ ಕೊಟ್ಟಿತು. ದಂತಗಳಿಗಾಗಿ ಆನೆಗಳನ್ನು ಕೊಲ್ಲುವುದನ್ನು ನಿರುತ್ತೇಜಿಸುವ ಕ್ರಮವಾಗಿ ತನ್ನ ಸಂಗ್ರಹಾಗಾರದಲ್ಲಿರುವ ಬೃಹತ್ ಆನೆ ದಂತಗಳನ್ನು ಕೆನ್ಯ ನಾಶಪಡಿಸುತ್ತಿದೆ.

ನೈರೋಬಿಯ ನ್ಯಾಶನಲ್ ಪಾರ್ಕ್‌ನಲ್ಲಿ ದಂತಗಳ ರಾಶಿಗೆ ಕೆನ್ಯದ ಅಧ್ಯಕ್ಷ ಉಹುರು ಕೆನ್ಯಟ್ಟ ಮೊದಲಿಗರಾಗಿ ಬೆಂಕಿ ಹಚ್ಚಿದರು. ಈ ದಂತಗಳ ರಾಶಿಗಳು ಸಂಪೂರ್ಣ ಸುಟ್ಟು ಹೋಗಲು ಹಲವು ದಿನಗಳು ಬೇಕಾಗಬಹುದೆಂದು ನಿರೀಕ್ಷಿಸಲಾಗಿದೆ.

ದಂತ ಕಳ್ಳಸಾಗಣೆಯನ್ನು ಕೊನೆಗೊಳಿಸಲು ಹಾಗೂ ಕಾಡಿನಲ್ಲಿರುವ ಆನೆಗಳು ಅಳಿವಿನಂಚಿಗೆ ಹೋಗುವುದನ್ನು ತಡೆಯಲು ದಂತ ವ್ಯಾಪಾರಕ್ಕೆ ಸಂಪೂರ್ಣ ನಿಷೇಧ ವಿಧಿಸಬೇಕೆಂದು ಅಧ್ಯಕ್ಷರು ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದರು.

ಇದು ಇತಿಹಾಸದಲ್ಲೇ ಬೆಂಕಿಗೆ ಆಹುತಿಯಾಗುತ್ತಿರುವ ಅತಿ ದೊಡ್ಡ ದಂತ ಸಂಗ್ರಹವಾಗಿದೆ. ಸಾವಿರಾರು ಆನೆಗಳ 105 ಟನ್ ದಂತಗಳು ಇಂದು ಬೆಂಕಿಗೆ ಆಹುತಿಯಾದವು. ಅದೇ ವೇಳೆ, ಸುಮಾರು 340 ಖಡ್ಗಮೃಗಗಳ 1.35 ಟನ್ ಕೊಂಬುಗಳನ್ನೂ ಸುಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News