ಆಳ್ವಾಸ್ ಪದವಿ ಪೂರ್ವ ಕಾಲೇಜಿನ 429 ವಿದ್ಯಾರ್ಥಿಗಳು ಆಯ್ಕೆ
ಮೂಡುಬಿದಿರೆ, ಎ.30: ರಾಷ್ಟ್ರೀಯ ತಾಂತ್ರಿಕ ಸಂಸ್ಥೆ (ಎನ್.ಇ.ಟಿ)ಗೆ ಪ್ರವೇಶ ನೀಡುವ ಜೆ.ಇ.ಇ ಮೈನ್ಸ್ ಅರ್ಹತಾ ಪರೀಕ್ಷೆಯಲ್ಲಿ ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 429 ವಿದ್ಯಾರ್ಥಿಗಳು ತೇರ್ಗಡೆಯಾಗಿ ಐಐಟಿ ಪ್ರವೇಶದ ಅಂತಿಮ ಪರೀಕ್ಷೆ ಜೆ.ಇ.ಇ. ಅಡ್ವಾನ್ಸ್‌ಗೆ ಆಯ್ಕೆಯಾಗಿರುತ್ತಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಸಿಬಿಎಸ್‌ಇ ಬೋರ್ಡ್ ನಡೆಸುವ ಜೆ.ಇ.ಇ. ಮೈನ್ಸ್ ಪರೀಕ್ಷೆಯಲ್ಲಿ ದೇಶದಾದ್ಯಂತ ಸುಮಾರು 13.56 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 1.5 ಲಕ್ಷ ವಿದ್ಯಾರ್ಥಿಗಳು ಜೆ.ಇ.ಇ ಅಡ್ವಾನ್ಸ್‌ಗೆ ಆಯ್ಕೆಯಾಗಿದ್ದಾರೆ. ಇವರಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 429 ವಿದ್ಯಾರ್ಥಿಗಳು ಉನ್ನತ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಈ ಪೈಕಿ ಪವನ್ ಕುಮಾರ್, ಸಚಿನ್ ಮನೋಹರ್ ರನಸುಬೆ, ಆದಿತ್ಯ ಸಿ. ಸಾಗರ್ ಹಂಗರಗಿ, ನಿಖಿಲ್ ಪಾಟೀಲ್, ಮಧು ಬಿ.ಕೆ., ನಿಹಾಲ್ ಎಚ್. ಅಕ್ಷತಾ ಅತ್ಯಧಿಕ ಅಂಕಗಳನ್ನು ಗಳಿಸಿದ್ದು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಜೆ.ಇ.ಇ ಮೈನ್ಸ್‌ನಲ್ಲಿ ಅಧಿಕ ಅಂಕಗಳನ್ನು ಪಡೆದ ಆಳ್ವಾಸ್ ವಿದ್ಯಾರ್ಥಿಗಳ ವಿವರ
ವಿದ್ಯಾರ್ಥಿಗಳು ಫಿಸಿಕ್ಸ್ ಕೆಮಿಸ್ಟ್ರಿ ಗಣಿತ ಒಟ್ಟು
1. ಪವನ್ ಕುಮಾರ್ ಎನ್ 73 79 40 192
2. ಸಚಿನ್ ಮನೋಹರ್ (ಎ) 39 78 63 180
3. ಆದಿತ್ಯ ಸಿ (ಎ) 54 56 64 174
4. ಸಾಗರ್ ಹನ್ಗರಗಿ (ಎ) 55 73 45 173
5. ನಿಖಿಲ್ ಪಾಟೀಲ್(ಎ) 36 90 45 171
6.ಆರ್. ರಾಕೇಶ್ (ಎ) 38 69 62 169
7.ತಪನ್ ಕೆ ಟಿ 33 72 62 167
8. ಸಚಿನ್ ಕೆ ಎವ್. (ಎ) 52 62 48 162
9. ಬಾರತ್ ಬಿ(ಎ) 52 61 45 158
10. ಕೆ. ರಘು (ಎ) 37 78 38 153
11. ಮಧು ಬಿ.ಕೆ 75 81 18 174
12. ನಿಹಾಳ್ ಹೆಚ್. 70 90 10 170
13. ಅಕ್ಷತಾ 62 60 48 170
14. ವಿನಯಕುಮಾರ್ 51 76 41 168
15. ಸಿದ್ದೇಶ್ ಎಲ್.ಸಿ 60 67 38 165
16. ಅಮೂಲ್ಯ ಕೆ 69 73 23 165
17. ನರೇಶ್ ಎಸ್ ಎ 59 73 26 158
18. ವಿನಯ ಎಸ್. ಪಿ 45 85 21 151
19. ಅನಂತ್ ಜಿ 56 82 12 150
20. ಸಾಯಿ ಕುಮಾರ್ 40 64 41 145
21. ದಿಜೇಂದ್ರ ಕುಮಾರ್ 36 80 27 143
22. ದೋರೆಸ್ವಾಮಿ (ಎ) 37 86 20 143
23.ನಿಲೇಶ್ 61 45 37 143
24. ಐ ಜಗನ್ಮೋಹನ್ ರೆಡ್ಡಿ 65 57 26 148
25.ನಿಖಿಲ್ ಚೆಟ್ಟರ್ 28 78 41 147
26. ಧನುಶ್ ಶೆಟ್ಟಿ 39 85 21 145