×
Ad

ಮೇ 2ರಂದು ಮೂಡಿಗೆರೆ ಖಾಝಿಗೆ ಸನ್ಮಾನ; ಪ್ರಚಾರ ಸಮ್ಮೇಳನ

Update: 2016-04-30 23:13 IST

ಉಪ್ಪಿನಂಗಡಿ, ಎ.30: ಕುಂಬ್ಳೆಯ ಬದ್ರಿಯಾ ನಗರದಲ್ಲಿರುವ ಇಮಾಂ ಶಾಫಿ ಇಸ್ಲಾಮಿಕ್ ಅಕಾಡಮಿಯ ಜಿಲ್ಲಾ ಸಮ್ಮೇಳನದ ಪ್ರಚಾರಾರ್ಥ ಉಪ್ಪಿನಂಗಡಿಯಲ್ಲಿ ಮೇ 2ರಂದು ಬೃಹತ್ ಸಮಸ್ತ ಸಮ್ಮೇಳನ ನಡೆಯಲಿದ್ದು, ಈ ಸಂಭರ್ ಮೂಡಿಗೆರೆಯ ನೂತನ ಖಾಝಿಯಾಗಿ ನೇಮಕಗೊಂಡ ಎಂ.ಎ. ಖಾಸಿಂ ಉಸ್ತಾದರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿಯ ಚೇರ್‌ಮೆನ್ ಅಸೈಯದ್ ಅನಸ್ ತಂಙಳ್ ಅಲ್‌ಅಝ್‌ಹರಿ ತಿಳಿಸಿದ್ದಾರೆ.

ಉಪ್ಪಿನಂಗಡಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಉಪ್ಪಿನಂಗಡಿಯ ಮಾಲಿಕುದ್ದೀನಾರ್ ಜುಮಾ ಮಸೀದಿಯ ವಠಾರದಲ್ಲಿ ಸಂಜೆ 5ಕ್ಕೆ ಸಮ್ಮೇಳನ ನಡೆಯಲಿದೆ. ಕಾರ್ಯಕ್ರಮವನ್ನು ಮೂಡಿಗೆರೆ ಸಂಯುಕ್ತ ಜಮಾಅತ್‌ನ ಖಾಝಿ ಹಾಗೂ ಸಮಸ್ತ ಕೇಂದ್ರ ಮುಶಾವರದ ಸದಸ್ಯ ಶೈಖುನಾ ಅಲ್‌ಹಾಜಿ ಎಂ.ಎ. ಖಾಸಿಂ ಉಸ್ತಾದ್ ಉದ್ಘಾಟಿಸಲಿದ್ದಾರೆ. ಉಪ್ಪಿನಂಗಡಿ ಮಾಲಿಕುದ್ದೀನಾರ್ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಮುಸ್ತಾಫ ಕೆಂಪಿ ಅಧ್ಯಕ್ಷತೆ ವಹಿಸಲಿದ್ದಾರೆ. ಅಸೈಯದ್ ಅನಸ್ ತಂಙಳ್ ಅಲ್‌ಅಝ್‌ಹರಿ ದುಆ ನೆರವೇರಿಸಲಿದ್ದು, ಮಾಲಿಕುದ್ದೀನಾರ್ ಹಿಪ್ಲುಳ್ ಕುರ್‌ಆನ್ ಕಾಲೇಜಿನ ಉಸ್ತಾದ್ ಹಾಫಿಳ್ ತ್ವಯ್ಯಿಬ್ ಖಾಸಿಮಿ ಕಿರಾಅತ್ ಪಠಿಸಲಿದ್ದಾರೆ ಎಂದರು.

ಖ್ಯಾತ ವಾಗ್ಮಿ ನಾಸಿರ್ ಪೈಝಿ ಕೂಡತ್ತಾಯಿ ಮುಖ್ಯ ಪ್ರಬಾಷಣ ಮಾಡಲಿದ್ದು, ಕುಂಬ್ಳೆ ಇಮಾಂ ಶಾಫಿ ಇಸ್ಲಾಮಿಕ್ ಅಕಾಡಮಿ ಜಿಲ್ಲಾ ಸಮ್ಮೇಳನದ ಕನ್ವೀನರ್ ಬಿ.ಕೆ. ಅಬ್ದುಲ್ ಖಾದರ್ ಖಾಸಿಮಿ ಬಂಬ್ರಾಣ, ಸೈಯದ್ ಮುಹಮ್ಮದ್ ಜುನೈದ್ ಜಿಫ್ರೀ ತಂಙಳ್ ಆತೂರು, ಇಮಾಂ ಶಾಫಿ ಇಸ್ಲಾಮಿಕ್ ಕಾಲೇಜಿನ ಪ್ರೊಫೆಸರ್ ಅನ್ವರ್ ಅಲಿ ಹುದವಿ ಚೆಮ್ಮಾಡ್, ಮಾಲಿಕುದ್ದೀನಾರ್ ಜುಮಾ ಮಸೀದಿಯ ಮುದರ್ರಿಸ್ ಅಬ್ದುಸ್ಸಲಾಂ ಪೈಝಿ ಎಡಪ್ಪಾಲ್, ರೌಲತುಲ್ ಉಲಮಾದ ಅಧ್ಯಕ್ಷ ಎಂ.ಪಿ. ಮುಹಮ್ಮದ್ ಸಅದಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಸಮ್ಮೇಳನದ ಸ್ವಾಗತ ಸಮಿತಿಯ ಕನ್ವೀನರ್ ಕೆ.ವಿ. ಅಬ್ದುಲ್ ಮಜೀದ್ ದಾರಿಮಿ ಸ್ವಾಗತಿಸಲಿದ್ದಾರೆ ಎಂದು ಅವರು ತಿಳಿಸಿದರು.

ಮೇ 4ರಿಂದ 7ರವರೆಗೆ ಕುಂಬ್ಳೆಯ ಬದ್ರಿಯಾ ನಗರದಲ್ಲಿರುವ ಇಮಾಂ ಶಾಫಿ ಇಸ್ಲಾಮಿಕ್ ಅಕಾಡಮಿಯಲ್ಲಿ ಜಿಲ್ಲಾ ಸಮ್ಮೇಳನ ನಡೆಯಲಿದೆ. ಆದ್ದರಿಂದ ಮೂಡಿಗೆರೆಯ ಖಾಝಿ ಎಂ.ಎ. ಖಾಸಿಂ ಅವರ ಶಿಷ್ಯಂದಿರ ಸಂಘಟನೆಯಾದ ರೌಲತುಲ್ ಉಲಮ, ಮಾಲಿಕುದ್ದೀನಾರ್ ಜುಮಾ ಮಸೀದಿಯ ಆಡಳಿತ ಸಮಿತಿ ಹಾಗೂ ಎಸ್ಕೆಎಸ್ಸೆಸ್ಸೆಫ್‌ಉಪ್ಪಿನಂಗಡಿ ವಲಯ ಜಂಟಿಯಾಗಿ ಉಪ್ಪಿನಂಗಡಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಿದೆ ಎಂದು ಅಸೈಯದ್ ಅನಸ್ ತಂಙಳ್ ಅಲ್‌ಅರ್ಹರಿ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ರೌಲತುಲ್ ಉಲಮದ ದ.ಕ. ಜಿಲ್ಲಾ ಕಾರ್ಯದರ್ಶಿ ಕೆ.ಎಚ್. ಅಶ್ರಪ್ ಹನೀಫೀ ಕರಾಯ, ಮಾಲಿಕುದ್ದೀನಾರ್ ಜುಮಾ ಮಸೀದಿಯ ಕಾರ್ಯದರ್ಶಿ ಎಚ್. ಯೂಸುಪ್ ಹಾಜಿ, ಸಮ್ಮೇಳನದ ಸ್ವಾಗತ ಸಮಿತಿಯ ಕನ್ವೀನರ್ ಕೆ.ವಿ. ಅಬ್ದುಲ್ ಮಜೀದ್ ದಾರಿಮಿ ಹಾಗೂ ಎಸ್ಕೆಎಸ್ಸೆಸ್ಸೆಫ್ ಉಪ್ಪಿನಂಗಡಿ ವಲಯ ಉಪಾಧ್ಯಕ್ಷ ಮುಹಮ್ಮದ್ ಕೂಟೇಲು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News