×
Ad

ಸುಳ್ಯ: ರಬ್ಬರ್ ಗಿಡಗಳು ಬೆಂಕಿಗಾಹುತಿ

Update: 2016-05-01 00:04 IST

ಸುಳ್ಯ, ಎ.30: ತೊಡಿಕಾನ ಗ್ರಾಮದ ಕುಂಟುಕಾಡು ಎಂಬಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ 800ಕ್ಕೂ ಅಧಿಕ ರಬ್ಬರ್ ಗಿಡಗಳು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.

ಕುಂಟುಕಾಡು ಬಾಲಕೃಷ್ಣ ಗೌಡ ಎಂಬವರ ಜಾಗದಲ್ಲಿ ವಿದ್ಯುತ್ ಟಿಸಿಯೊಂದಿದ್ದು, ಪಕ್ಕದಲ್ಲಿಯೇ ಬಾಲಕೃಷ್ಣರಿಗೆ ಸೇರಿದ ಸುಮಾರು 1,300ಕ್ಕೂ ಅಧಿಕ ರಬ್ಬರ್ ಗಿಡಗಳಿದ್ದವು. ವಿದ್ಯುತ್ ಟಿಸಿಯಲ್ಲಿ ಬೆಂಕಿ ಉಂಟಾಗಿ ಅಲ್ಲಿಂದ ರಬ್ಬರ್ ತೋಟಕ್ಕೆ ಬೆಂಕಿ ಹರಡಿತ್ತು. ಇದರಿಂದ ಸುಮಾರು 800ಕ್ಕೂ ಅಧಿಕ ರಬ್ಬರ್ ಮರಗಳಿಗೆ ಬೆಂಕಿ ತಗಲಿದ್ದು, ಭಾಗಶಃ ತೋಟ ಉರಿದುಹೋಯಿತು.

ತೊಡಿಕಾನದ ವೆಂಕಟ್ರಮಣ ಭಟ್ ಎಂಬವರ ರಬ್ಬರ್ ತೋಟಕ್ಕೂ ಬೆಂಕಿ ಬಿದ್ದು ಅಲ್ಲಿಯೂ 800 ಮರಗಳು ಸುಟ್ಟು ಹೋಗಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News