×
Ad

ಬಗ್ದಾದ್ ಸ್ಫೋಟ: ಕನಿಷ್ಠ 23 ಸಾವು

Update: 2016-05-01 00:29 IST

ಬಗ್ದಾದ್, ಎ. 30: ಬಗ್ದಾದ್‌ನಲ್ಲಿ ಶನಿವಾರ ಸಂಭವಿಸಿದ ಕಾರ್‌ಬಾಂಬ್ ಸ್ಫೋಟದಲ್ಲಿ ಕನಿಷ್ಠ 23 ಮಂದಿ ಮೃತಪಟ್ಟಿದ್ದಾರೆ ಹಾಗೂ ಕನಿಷ್ಠ 38 ಮಂದಿ ಗಾಯಗೊಂಡಿದ್ದಾರೆ.
ಉತ್ತರ ಬಗ್ದಾದ್‌ನಲ್ಲಿ ಮಸೀದಿಯೊಂದಕ್ಕೆ ಹೋಗುತ್ತಿದ್ದ ಜನರನ್ನು ಗುರಿಯಾಗಿಸಿ ಸ್ಫೋಟ ನಡೆಸಲಾಯಿತು.
ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿದೆ. ಆತ್ಮಹತ್ಯಾ ಕಾರ್‌ಬಾಂಬರ್ ಓರ್ವ 3 ಟನ್ ಸ್ಫೋಟಕಗಳನ್ನು ಸ್ಫೋಟಿಸಿದ್ದಾನೆ ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News