ಉಡುಪಿ ಜಿಲ್ಲಾ ವಕ್ಫ್ ಸರ್ವೆ: ನಕ್ವ ಯಹ್ಯಾ ಅವರಿಗೆ ಅಭಿನಂದನಾ ಪತ್ರ
Update: 2016-05-01 11:42 IST
ಉಡುಪಿ, ಮೇ 1: ಉಡುಪಿ ಜಿಲ್ಲೆಯಲ್ಲಿ ವಕ್ಫ್ ಸರ್ವೆಯನ್ನು ಪೂರ್ಣಗೊಳಿಸುವಲ್ಲಿ ನಿರ್ವಹಿಸಿದ ಸಕ್ರೀಯ ಪಾತ್ರಕ್ಕಾಗಿ ಜಿಲ್ಲಾ ವಕ್ಫ್ ಸಲಹ ಸಮಿತಿ ಅಧ್ಯಕ್ಷ ನಕ್ವ ಯಹ್ಯಾ ಅವರಿಗೆ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಡಾ. ಮುಹಮ್ಮದ್ ಯೂಸುಫ್ ಅಭಿನಂದನ ಪತ್ರ ಪ್ರದಾನ ಮಾಡಿದ್ದಾರೆ.
ಈ ಅಭಿನಂದನ ಪತ್ರವನ್ನು ಕೇಂದ್ರ ಮಾಜಿ ಸಚಿವ ರಹ್ಮಾನ್ ಖಾನ್ ಅವರು ನಕ್ವ ಯಹ್ಯಾ ಅವರಿಗೆ ಇತ್ತೀಚೆಗೆ ಪ್ರದಾನಿಸಿದರು. ಈ ಸಂದರ್ಭ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಡಾ. ಮುಹಮ್ಮದ್ ಯೂಸುಫ್ ಹಾಗೂ ಇತರರು ಉಪಸ್ಥಿತರಿದ್ದರು.