ಮಂಗಳೂರು: ನೂತನ ಫರ್ನಿಚರ್- ಇಂಟಿರಿಯರ್ ಮಳಿಗೆಗೆ ಚಾಲನೆ
ಮಂಗಳೂರು, ಮೇ 1: ಲೇಡಿಹಿಲ್ ನ ಸಾಯಿ ಬಾಬಾ ಮಂದಿರದ ಬಳಿಯಲ್ಲಿ ಇಂದು ನೂತನ ಫರ್ನಿಚರ್ ಮತ್ತು ಇಂಟಿರಿಯರ್ ಮಳಿಗೆ ವಿ.ಕೆ ಲಿವಿಂಗ್ ಕಾನ್ಸೆಪ್ಟ್ ಅನ್ನು ಶಿರ್ಡಿ ಸಾಯಿ ಬಾಬಾ ಮಂದಿರದ ಮ್ಯಾನೆಜಿಂಗ್ ಟ್ರಸ್ಟಿ ವಿಶ್ವಾಸ್ ಕುಮಾರ್ ದಾಸ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮನೆಯ ಅಂದವನ್ನು ಹೆಚ್ಚಿಸಲು ಫರ್ನಿಚರ್ ಅಗತ್ಯ. ಸ್ಥಳೀಯವಾಗಿ ತಯಾರಾಗುವ ವಿ.ಕೆ ಫರ್ನಿಚರ್ ನ ಫರ್ನಿಚರ್ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. ಮಂಗಳೂರು ನಗರದ ಅಭಿವೃದ್ಧಿ ಗೆ ಬೇಕಾದ ಎಲ್ಲಾ ಸವಲತ್ತುಗಳಿದ್ದರೂ ಮಂಗಳೂರಿನಲ್ಲಿ ಸಾಮರಸ್ಯ ಕೊರತೆಯಿರುವುದರಿಂದ ನಗರದ ಅಭಿವೃದ್ಧಿ ಕುಂಠಿತಗೊಂಡಿದೆ. ನಗರದಲ್ಲಿ ಸಾಮರಸ್ಯ ಮೂಡಿ ಅಭಿವೃದ್ಧಿ ಗೆ ಎಲ್ಲರೂ ಶ್ರಮಿಸಲು ಯತ್ನಿಸಬೇಕು ಎಂದು ಹೇಳಿದರು.
ವಿ ಕೆ ಲಿವಿಂಗ್ ಕಾನ್ಸೆಪ್ಟ್ ಮಳಿಗೆಯಲ್ಲಿ ಅತ್ಯುತ್ತಮ ಗುಣಮಟ್ಟದ ಫರ್ನಿಚರ್ ಗಳಿದ್ದು ಅವರಿಗೆ ಶುಭವಾಗಲಿ ಎಂದು ಹೇಳಿದರು.
ವಿ.ಕೆ ಲಿವಿಂಗ್ ಕಾನ್ಸೆಪ್ಟ್ ಮಾಲಕ ವಿಠಲ್ ಕುಲಾಲ್ ಅವರ ತಂದೆ ಕುಟ್ಟಿ ಮೂಲ್ಯ ತಾಯಿ ಯಮುನಾ ಅವರು ದೀಪ ಬೆಳಗಿಸಿದರು.
ಕಾರ್ಯಕ್ರಮದಲ್ಲಿ ವಿ.ಕೆ.ಕಾನ್ಸೆಪ್ಟ್ ಮಾಲಕ ವಿಠಲ್ ಕುಲಾಲ್ , ಪನಿಯಾಲ ಮತ್ತು ಅಸೋಸಿಯೇಟ್ ಕಾರ್ಪೊರೇಟ್ ಲಾ ಪರ್ಮ್ ಮ್ಯಾನೇಜಿಂಗ್ ಪಾರ್ಟನರ್ ವಿವೇಕಾನಂದ ಪನಿಯಾಲ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಬಿ. ಎ. ಮುಹಮ್ಮದ್ ಹನೀಫ್, ಬೆನ್ಲಿನ್ ಬಿಲ್ಡಿಂಗ್ ಮಾಲಕ ರೇಮಂಡ್ ಬೆನೆಡಿಕ್ಟ್ ನೊರೋನ್ಹ, ರೈಲ್ವೆ ಪಾಲಕ ರಮೇಶ್ ಪಿ, ಉದ್ಯಮಿ ಬಿ.ಎಂ ಬದ್ರುದ್ದೀನ್, ಕಲಾವಿದ ಪ್ರಕಾಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಮನಪಾ ಮೇಯರ್ ಹರಿನಾಥ್ ಅವರು ಫರ್ನಿಚರ್ ತಯಾರಿಕೆಯಲ್ಲಿ ಅನುಭವವಿರುವ ವಿಠಲ್ ಕುಲಾಲ್ ಅವರ ಉದ್ಯಮಕ್ಕೆ ಶುಭವಾಗಲಿ ಎಂದು ಹಾರೈಸಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.