×
Ad

ತುಳುನಾಡ ರಕ್ಷಣಾ ವೇದಿಕೆಯಿಂದ ಕಾರ್ಮಿಕರ ದಿನಾಚರಣೆ

Update: 2016-05-01 12:27 IST

ಮಂಗಳೂರು, ಮೇ 1: ತುಳುನಾಡ ರಕ್ಷಣಾ ವೇದಿಕೆಯಿಂದ ಇಂದು ನಗರದ ವುಡ್ ಲ್ಯಾಂಡ್ ನಲ್ಲಿ ಕಾರ್ಮಿಕರ ದಿನಾಚರಣೆ ಯನ್ನು ಸಂಚಾರ ಎಸಿಪಿ ಉದಯ್ ಕುಮಾರ್ ನಾಯಕ್ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು ಅಟೋ ರಿಕ್ಷಾ ಚಾಲಕರಿಗೆ ನೀಡಲಾಗುವ ವಿಮಾ ಕಾರ್ಡ್ ಸದುಪಯೋಗಪಡಿಸಬೇಕು ಎಂದು ಹೇಳಿದರು.

ನಗರಕ್ಕೆ  ಹೊರಗಿನಿಂದ ಬರುವ ಪ್ರವಾಸಿಗರಿಗೆ ಉತ್ತಮ ಸೇವೆ ನೀಡುವ ಮೂಲಕ ಮಂಗಳೂರಿಗೆ ಉತ್ತಮ ಹೆಸರು ಬರುವಂತೆ ಮಾಡಬೇಕು. ನಗರದಲ್ಲಿ ಅಪಘಾತ ನಡೆದ ಸಂದರ್ಭ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡುವಂತೆ ವಿನಂತಿಸಿದರು.

ಕಾರ್ಯಕ್ರಮದಲ್ಲಿ ಕಾರ್ಮಿಕ ಅಧಿಕಾರಿ ಮೇರಿ ಮಾತನಾಡಿ, ವಾಹನ ಚಾಲಕರಿಗೆ ಅಪಘಾತ ಪರಿಹಾರ ವಿಮೆಯನ್ನು ಹೆಚ್ಚಿನ ವಾಹನ ಚಾಲಕರು ಪಡೆಯುವಂತೆ ವಿನಂತಿಸಿದರು.
ಕಾರ್ಯಕ್ರಮದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ  ಜೆಪ್ಪು , ತುಳುನಾಡ ರಕ್ಷಣಾ ವೇದಿಕೆಯ ಮುಖಂಡರುಗಳಾದ ಕೆ. ಮುನೀರ್ ಬಾವ, ಪ್ರಶಾಂತ್ ರಾವ್ ಕಡಬ,ಆನಂದ್ ಅಮೀನ್ ಅಡ್ಯಾರ್ ಉಪಸ್ಥಿತರಿದ್ದರು. ಸಿರಾಜ್ ಅಡ್ಕರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅಪಘಾತ ವಿಮೆಯ ಕಾರ್ಡನ್ನು  ರಿಕ್ಷಾ ಚಾಲಕರಿಗೆ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News