ಶಾಸಕ ವೈದ್ಯ ಅಧಿಕಾರಿಗಳ ಮೇಲೆ ಕೋಪ ಗೊಂಡಿದ್ದು ಕ್ಷೇತ್ರದ ಜನಪರ ಕಾಳಜಿಯಿಂದಾಗಿ -ಯೋಗೇಶ್ ಮೊಗೇರ್
ಭಟ್ಕಳ, ಮೇ 1: ಶಾಸಕ ಮಂಕಾಳ ವೈದ್ಯ ಅವರು ಸದಾ ಜನಪರವುಳ್ಳ ವ್ಯಕ್ತಿಯಾಗಿದ್ದು ಶಾಸಕರಾಗುವ ಪೂರ್ವದಲ್ಲಿಯೂ ಸಹ ಅವರು ಜನಹಿತವನ್ನೇ ಬಯಸಿದವರು. ತಮ್ಮ ಕ್ಷೇತ್ರದಲ್ಲಿ ಜನತೆಗೆ ಆಗುತ್ತಿರುವ ತೊಂದರೆ, ಅನ್ಯಾಯವನ್ನು ಅವರು ಹೊನ್ನಾವರದ ಸಭೆಯಲ್ಲಿ ತೊರ್ಪಡಿಸಿದರೇ ವಿನಹ ಅಲ್ಲಿ ಅವರಿಗೆ ಅಧಿಕಾರಿಗಳ ಮೇಲೆ ಸಿಟ್ಟಿಲ್ಲ ಎನ್ನುವುದು ಅವರ ಮಾತನಿಂದಲೇ ತಿಳಿಯುತ್ತದೆ ಎಂದು ಶಿರಾಲಿ ಗ್ರಾಮ ಪಂಚಾಯತ್ ಸದಸ್ಯ ಯೋಗೇಶ ಮೊಗೇರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಪ್ರಾಮಾಣಿಕತೆಯ ಕುರಿತಾಗಲೀ, ಅವರ ಕಾರ್ಯದ ಕುರಿತಾಗಲೀ ಯಾವುದೇ ಸಾರ್ವಜನಿಕರೆಗೆ ಸಂದೇಹವಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಅವರು ಕಾನೂನಿಗಿಂತ ಮಾನವೀಯತೆಗೆ ಹೆಚ್ಚು ಒತ್ತು ಕೊಡಬೇಕಾಗಿತ್ತು ಎನ್ನುವುದು ಶಾಸಕರ ಕಾಳಜಿಯಾಗಿತ್ತು. ಅಧಿಕಾರಿಗಳು ಕೂಡಾ ಸಮಾಜದ ವ್ಯಕ್ತಿಗಳೇ ಆಗಿದ್ದು ಮಾನವೀಯತೆಯ ದೃಷ್ಟಿಯಿಂದ ಬಡವರಿಗೆ, ಸಂಕಷ್ಟದಲ್ಲಿರುವವ ರಿಗೆ ಸಹಾಯ ಮಾಡಲು ಕಾನೂನು ಚೌಕಟ್ಟು ಮೀರಿ ಕೆಲಸ ಮಾಡಬೇಕಾಗುತ್ತದೆ ಎನ್ನುವುದು ಶಾಸಕರ ಕಳಕಳಿಯಾಗಿತ್ತು ಎಂದು ಹೇಳಿದ ಯೋಗೇಶ ಮೊಗೇರ ಶಾಸಕರ ಜನಪರ ಕಾಳಜಿಯೇ ಅಂದು ಅವರನ್ನು ಎರು ಧ್ವನಿಯಲ್ಲಿ ಮಾತನಾಡಿಸಿತ್ತೇ ವಿನಹ ಮಸ್ಥಿತಿಯಲ್ಲಿ ಶಾಸಕರು ಅತ್ಯಂತ ಉತ್ತಮರು ಎಂದೂ ಹೇಳಿದ್ದಾರೆ.