ಸಂಚಾರಿ ಬೃಹತ್ ಲೋಕ ಅದಾಲತ್ ವಾಹನಕ್ಕೆ ಚಾಲನೆ
Update: 2016-05-01 13:31 IST
ಭಟ್ಕಳ, ಮೇ 1: ಇಲ್ಲಿನ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಸಂಚಾರಿ ಬೃಹತ್ ಲೋಕ ಅದಾಲತ್ ಹಾಗೂ ಕಾನೂನು ವಿದ್ಯಾ ಪ್ರಸಾರದ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸಂಚಾರಿ ಬಸ್‌ಗೆ ಹಿರಿಯ ಸಿವಿಲ್ ನ್ಯಾಯಾಧೀಶ ಯಶ್ವಂತ್ ಕುಮಾರ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಿವಿಲ್ ನ್ಯಾಯಾಧೀಶ ಹನುಮಂತ ರಾವ್ ಕುಲಕರ್ಣಿ, ಸಹಾಯಕ ಸರಕಾರಿ ಅಭಿಯೋಜಕಿ ಇಂದಿರಾ ನಾಯ್ಕ, ವಕೀಲರ ಸಂಘದ ಅಧ್ಯಕ್ಷ ರಾಜೇಶ ನಾಯ್ಕ, ಹಿರಿಯ ನ್ಯಾಯವಾದಿ ಆರ್. ಆರ್. ಶ್ರೇಷ್ಟಿ, ವಿ.ಆರ್. ಸರಾಫ್, ಜಿ.ಟಿ. ನಾಯ್ಕ, ಸಂತೋಷ ಶೆಟ್ಟಿ, ಪಾಂಡು ನಾಯ್ಕ, ಎಸ್. ಜೆ. ನಾಯ್ಕ, ಎಂ.ಟಿ.ನಾಯ್ಕ, ಕಮಲಾಕರ ಬೈರುಮನೆ ಮುಂತಾದವರು ಉಪಸ್ಥಿತರಿದ್ದರು.