ಆಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣ: ಮಾಜಿ ವಾಯುಸೇನಾ ಪ್ರಮುಖ ತ್ಯಾಗಿಗೆ ಇ.ಡಿ ಸಮನ್ಸ್
Update: 2016-05-01 18:44 IST
ಹೊಸದಿಲ್ಲಿ, ಮೆ 1:ಆಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಭಾರತೀಯ ವಾಯುಸೇನೆಯ ಮಾಜಿ ಮುಖ್ಯಸ್ಥ ಎಸ್‌ಪಿ ತ್ಯಾಗಿಯವರಿಗೆ ಮೆ. 5ಕ್ಕೆ ತನ್ನ ಮುಂದೆ ಹಾಜರಾಗಲು ಸಮನ್ಸ್ ಕಳುಹಿಸಿದೆ ಎಂದು ವರದಿಯಾಗಿದೆ.
ತ್ಯಾಗಿ 3,600 ಕೋಟಿ ರೂಪಾಯಿ ಹೆಲಿಕಾಪ್ಟರ್ ಒಪ್ಪಂದ ಪ್ರಕಾರ ಆಂಗ್ಲೋ ಇಟಲಿಯ ಆಗಸ್ಟಾ ವೆಸ್ಟ್‌ಲ್ಯಾಂಡ್ ಕಂಪೆನಿಗೆ ಕೊಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಎಂದು ತ್ಯಾಗಿ ವಿರುದ್ಧ ಆರೋಪ ಹೊರಿಸಲಾಗಿದೆ.
ಕಳೆದ ವರ್ಷ ಸಿಬಿಐ ತನಿಖೆಯ ವೇಳೆ ಮಾಜಿ ವಾಯು ಸೇನಾ ಪ್ರಮುಖತ್ಯಾಗಿ ಆಗಸ್ಟಾ ವೆಸ್ಟ್‌ಲ್ಯಾಂಡ್ ಒಪ್ಪಂದ ವಿಚಾರವಾಗಿ ರಾಲ್ಫ್ ಹೇಸ್ಕ್‌ರನ್ನು ಭೇಟಿಯಾಗಿರುವುದಾಗಿ ಒಪ್ಪಿಕೊಂಡಿದ್ದರು ಎಂದು ವರದಿಯಾಗಿದೆ.