ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಪೂರ್ಣ ಬಹುಮತದೊಂದಿಗೆ ಸರಕಾರ ರಚಿಸಲಿದೆ: ದಿಲ್ಲಿ ಉಪಮುಖ್ಯಮಂತ್ರಿ ಸಿಸೋಡಿಯ
Update: 2016-05-01 19:19 IST
ಹೊಸದಿಲ್ಲಿ, ಮೆ 1: ದಿಲ್ಲಿಯ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯ ಇಂದು ಮುಂಬರುವ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ಪೂರ್ಣ ಬಹುಮತದಿಂದ ಆಮ್ ಆದ್ಮಿ ಪಾರ್ಟಿ ಸರಕಾರ ರಚಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ ಸಿಸೋಡಿಯರನ್ನು ಪಂಜಾಬ್‌ನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂದು ಪ್ರಶ್ನಿಸಿದಾಗ ಅರವಿಂದ್ ಕೇಜ್ರಿವಾಲ್ ಪಂಜಾಬ್‌ನ ಮುಖ್ಯಮಂತ್ರಿಯಾಗಲಾರರು ಎಂದು ಹೇಳಿದ್ದಾರೆ. ಯಾರು ಅಲ್ಲಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದನ್ನು ನಾವು ನಂತರ ಹೇಳುತ್ತೇವೆ. ಅಕಾಲಿ ದಳ ಮತ್ತು ಬಿಜೆಪಿ ಸಖ್ಯದ ಸರಕಾರ ಪಂಜಾಬ್‌ನಲ್ಲಿ ಉತ್ತಮ ಆಡಳಿತ ನೀಡಲು ವಿಫಲವಾಗಿದೆ ಎಂದು ಟೀಕಿಸಿದ್ದಾರೆ.
ದಿಲ್ಲಿ ಉಪಮುಖ್ಯಮಂತ್ರಿ ಮೂರನೆ ಬಾರಿ ಸಮಬೆಸ ವಾಹನ ಸಂಚಾರವನ್ನು ಜನರಲ್ಲಿ ಕೇಳಿಯೇ ಜಾರಿಗೆ ತರಲಾಗುವುದು ಎಂದಿರುವುದಾಗಿ ವರದಿಯಾಗಿದೆ.