ಕೇರಳ ಸರಕಾರದಿಂದ ಅಭಿವೃದ್ಧಿಯ ಕಡೆಗಣನೆ: ಕ್ಯಾ. ಗಣೇಶ್ ಕಾರ್ಣಿಕ್
ಮಂಜೇಶ್ವರ, ಮೇ 1: ಮಹತ್ವದ ಯೋಜನೆಯಾದ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರಕಾರ ಮುಂದಾದರೂ ಕೇರಳ ಸರಕಾರ ಸೂಕ್ತ ಜಾಗ ನೀಡದಿರುವುದರಿಂದ ರಸ್ತೆ ಅಭಿವೃದ್ಧಿಯಲ್ಲಿ ಬಹಳಷ್ಟು ಹಿಂದುಳಿದಿದೆ. ಕೇರಳ ಸರಕಾರದ ಅಭಿವೃದ್ಧಿಯ ಅವಗಣನೆ ಇದಕ್ಕೆ ಕಾರಣವಾಗಿದೆ ಎಂದು ಕರ್ನಾಟಕ ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅಭಿಪ್ರಾಯಪಟ್ಟಿದ್ದಾರೆ.
ಮಧೂರು ಗ್ರಾಪಂ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಕೇರಳದಲ್ಲಿ ಅಧಿಕಾರಕ್ಕೆ ಬಂದ ಐಕ್ಯರಂಗ-ಎಡರಂಗ ಸರಕಾರಗಳು ಕೇರಳ ರಾಜ್ಯದ ಅಭಿವೃದ್ಧಿಗೆ ಬದಲಾಗಿ ರಾಜಕೀಯವನ್ನೇ ಮುಖ್ಯ ಉದ್ದೇಶವಾಗಿರಿಸಿಕೊಂಡಿದ್ದರಿಂದಾಗಿ ಆರೋಗ್ಯ, ನೀರು ಸರಬರಾಜು, ಶಿಕ್ಷಣ ಮೊದಲಾದ ಕ್ಷೇತ್ರಗಳಲ್ಲಿ ಹಿಂದುಳಿಯುವಂತಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿ ಅ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕೇರಳದಲ್ಲಿ ಬದಲಾವಣೆ ತರಬೇಕಾಗಿದೆ ಎಂದರು.
ಮಧೂರು ವಲಯ ಬಿಜೆಪಿ ಅಧ್ಯಕ್ಷ ಮಹಾಬಲ ರೈ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ಸಂಘದ ಮುಖಂಡ ಎನ್.ಪಿ.ರಾಧಾಕೃಷ್ಣನ್, ಬಿಡಿಜೆಎಸ್ ಮುಖಂಡ ಮೋಹನ್, ಬಿಜೆಪಿ ಮುಖಂಡ ಪಿ.ರಮೇಶ್, ಕಾಸರಗೋಡು ವಿಧಾನಸಭಾ ಕ್ಷೇತ್ರದ ಬಿಜೆಪಿ ಅ್ಯರ್ಥಿ ರವೀಶ ತಂತ್ರಿ ಕುಂಟಾರು, ಮಧೂರು ಗಾಪಂ ಅಧ್ಯಕ್ಷೆ ಮಾಲತಿ ಸುರೇಶ್, ಎಸ್.ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.