ಬೆಳ್ತಂಗಡಿ: ಸಿಐಟಿಯು ನೇತೃತ್ವದಲ್ಲಿ ಮೇ ದಿನಾಚರಣೆ
Update: 2016-05-02 14:43 IST
ಬೆಳ್ತಂಗಡಿ, ಮೇ 2: ಸಿಐಟಿಯು ನೇತೃತ್ವದಲ್ಲಿ ಮೇ ದಿನಾಚರಣೆ ನಡೆಯಿತು. ತಾಲೂಕಿನ ವಿವಿಧ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ಭಾಗಿಯಾಗಿ ಕಾರ್ಮಿಕರ ಶಕ್ತಿ ಪ್ರದರ್ಶಿಸಿ ಬ್ರಹತ್ ರ್ಯಾಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಿಐಟಿಯುನ ರಾಜ್ಯ ಕಾರ್ಯದರ್ಶಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ , ಉಪನ್ಯಾಸಕ ಪ್ರೋ.ಟಿ.ಪಿ ಆ್ಯಂಟನಿ , ಸಿಐಟಿಯು ತಾಲೂಕು ಅಧ್ಯಕ್ಷ ಶಿವಕುಮಾರ್ ಎಸ್.ಎಂ , ಕಾರ್ಯದರ್ಶಿ ವಸಂತನಡ , ಬೀಡಿ ಕಾರ್ಮಿಕ ಸಂಘಟನೆಯ ನೆಬಿಸಾ , ರೋಹಿನಿ , ಈಶ್ವರಿ , ಜಯರಾಮಯ್ಯ , ಕಟ್ಟಡ ಕಾರ್ಮಿಕ ಸಂಘಟನೆಯ ಲೋಕೇಶ್ ಕುದ್ಯಾಡಿ , ಅಟೋ ರಿಕ್ಷಾ ಚಾಲಕರ ಸಂಘಟನೆಯ ಶೇಖರ.ಎಲ್ , ಮೆಸ್ಕಾಂ ನೌಕರರ ಸಂಘಟನೆಯ ಮಹೇಶ್ , ಆಶಾ ನೌಕರರ ಸಂಘಟನೆಯ ದೇವಕಿ ಕಳೆಂಜ , ಪ್ರಾಂತ ರೈತ ಸಂಘಟನೆಯ ಶ್ಯಾಮರಾಜ್ , ಜನವಾದಿ ಮಹಿಳಾ ಸಂಘಟನೆಯ ಕಿರಣಪ್ರಭ , ಡಿವೈಎಫ್ಐ ಅಧ್ಯಕ್ಷ ಧನಂಜಯ್ ಪಟ್ರಮೆ ಉಪಸ್ಥಿತರಿದ್ದರು.