ಮೃತರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ವಿಶಿಷ್ಟ ಯೋಜನೆಗೆ ಚಾಲನೆ: ದ.ಕ. ಮುಸ್ಲಿಂ ಅಸೋಸಿಯೇಶನ್ ಉದ್ಘಾಟನೆ
ಮಂಗಳೂರು, ಮೇ 2: ದ.ಕ. ಜಿಲ್ಲೆಯ ಮುಸ್ಲಿಮ್ ಕುಟುಂಬಗಳ ಯಜಮಾನ ಅಥವಾ ದುಡಿಯುವ ವ್ಯಕ್ತಿ ಗಳು ಮೃತಪಟ್ಟ ಸಂದರ್ಭ ಜೀವನ ನಿರ್ವಹಣೆಗಾಗಿ ಆ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಅಸ್ತಿತ್ವಕ್ಕೆ ತರಲಾಗಿರುವ ದ.ಕ. ಮುಸ್ಲಿಮ್ ಅಸೋಸಿಯೇಶನ್(ಡಿಕೆಎಂಎ)ಗೆ ಸೋಮವಾರ ನಗರದ ಪುರಭವನದಲ್ಲಿ ಚಾಲನೆ ನೀಡಲಾಯಿತು. ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಖಾಝಿ ಅಲ್ಹಾಜ್ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ ದುಆ ನೆರವೇರಿಸಿದರು. ಆರೋಗ್ಯ ಸಚಿವ ಯು.ಟಿ.ಖಾದರ್ ಉಪಸ್ಥಿತರಿದ್ದು ಮಾತನಾಡಿ, ಇದೊಂದು ಪ್ರಯೋಜನಕಾರಿ ಯೋಜನೆಯಾ ಗಿದೆ. ಈ ಯೋಜನೆಯನ್ನು ಇನ್ನಷ್ಟು ಬಲಪಡಿಸುವುದಕ್ಕಾಗಿ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವತಿಯಿಂದ ಜಾರಿ ಗೊಳಿಸಲಾದ ಶಾದಿಭಾಗ್ಯ ಯೋಜನೆಯಂತೆ ಇದನ್ನು ಸರಕಾರಿ ಯೋಜನೆಯನ್ನಾಗಿ ಪರಿವರ್ತಿಸಲು ಮುಖ್ಯಮಂತ್ರಿ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೆ ತರುವ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ದೊರಕುವಂ ತಾಗಲು ಸರಕಾರ ಹಾಗೂ ಫಲಾನುಭವಿಗಳ ನಡುವೆ ಕೊಂಡಿಯಾಗಿ ಸಂಘಟನೆಗಳು ಕಾರ್ಯ ನಿರ್ವಹಿಸಬೇಕು ಎಂದು ಸಚಿವ ಖಾದರ್ ಈ ಸಂದರ್ಭ ಕರೆ ನೀಡಿದರಲ್ಲದೆ, ತಾನೂ ಅಸೋಸಿಯೇಶನ್‌ನ ಸದಸ್ಯ ದಾನಿಯಾಗುವುದಾಗಿ ಪ್ರಕಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಶನ್ ಸ್ಥಾಪಕಾಧ್ಯಕ್ಷ ಹಾಜಿ ಎಸ್.ಎಂ.ರಶೀದ್ ಹಾಜಿ ಮಾತ ನಾಡಿ, ಡಿಕೆಎಂಎ ಮೂಲಕ ಸಂಕಷ್ಟದಲ್ಲಿರುವ ಬಡ ಮತ್ತು ಮಧ್ಯಮ ವರ್ಗದ ಜನರ ನೆರವಿಗೆ ಯೋಜನೆ ಹಾಕಿ ಕೊಳ್ಳಲಾಗಿದೆ. ಹಿರಿಯ ಉದ್ಯಮಿ, ಸಾಮಾಜಿಕ ಕ್ಷೇತ್ರದ ಧುರೀಣ ಯೆನೆಪೊಯ ಅಬ್ದುಲ್ಲಾ ಕುಂಞಿಯವರನ್ನು ಅಸೋಸಿಯೇಶನ್‌ನ ಗೌರವಾಧ್ಯಕ್ಷರಾಗಿ ನೇಮಿಸಲಾಗಿದೆ. ಈ ಅಸೋಸಿಯೇಶನ್‌ನ ಫಲಾನುಭವಿ ಸದಸ್ಯರು ಮಾತ್ರ ಮರಣ ಹೊಂದಿದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಸೂಕ್ತ ಸಹಾಯಧನವನ್ನು ವಿತರಿಸಲಾಗುವುದು. ಅಸೋಸಿಯೇಶನ್‌ನಲ್ಲಿ ಸದಸ್ಯರಾದವರಿಗೆ ದೇರಳಕಟ್ಟೆಯ ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸಾ ಸೌಲಭ್ಯ ಕೂಡಾ ಸಿಗಲಿದೆ ಎಂದು ಮಾಹಿತಿ ನೀಡಿದರು.
200 ಮಂದಿ ದಾನಿ ಸದಸ್ಯರನ್ನು ಒಗ್ಗೂಡಿಸಿ, ಅಸೋಸಿ ಯೇಶನ್‌ನಲ್ಲಿ ಫಲಾನುಭವಿಗಳಾಗಿ ಗುರುತಿಸಿಕೊಂಡಿರುವ ಕುಟುಂಬಗಳ ಯಜಮಾನ ಮೃತಪಟ್ಟ ಸಂದರ್ಭ ಈ ದಾನಿ ಸದಸ್ಯರಿಂದ ತಲಾ 1,000 ರೂ.ನಂತೆ ಸಂಗ್ರಹಿಸಿ ಸಂಬಂಧ ಪಟ್ಟ ಕುಟುಂಬಕ್ಕೆ ವಿತರಿಸಲಾಗುವುದು ಎಂದು ರಶೀದ್ ಹಾಜಿ ತಿಳಿಸಿದರು. ಮಾಜಿ ಸಚಿವ ಬಿ.ಎ.ಮೊಯ್ದಿನ್ ಮಾತನಾಡಿ, ಈ ಯೋಜನೆ ಸ್ವಸಹಾಯ ಗುಂಪಿನಂತೆ ಕಾರ್ಯ ನಿರ್ವಹಿಸ ಲಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿರುವವರನ್ನು ಮೇಲೆತ್ತಿ ಸಹಕರಿಸಲು ನೆರವಾಗಲಿದೆ. ಸಂಕಷ್ಟದಲ್ಲಿರುವ ಕುಟುಂಬ ಸ್ವಾಭಿಮಾನದಿಂದ ಬದುಕಲು ನೆರವು ನೀಡಲಿದೆ ಎಂದರು. ಶಾಸಕ ಮೊಯ್ದಿನ್ ಬಾವ ಹಾಗೂ ಇತರ ಗಣ್ಯರು ಉಪಸ್ಥಿತ ರಿದ್ದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
ಸೈಫ್ವಾನ್ ಕುಟುಂಬಕ್ಕೆ 2 ಲಕ್ಷ ರೂ. ಘೋಷಣೆ
ತೊಕ್ಕೊಟ್ಟು ಒಳಪೇಟೆ ಬಳಿ ದುಷ್ಕರ್ಮಿಗಳ ದಾಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡ ಅಮಾಯಕ ಸೈಫ್ವಾನ್ ಕುಟುಂಬಕ್ಕೆ 2 ಲಕ್ಷ ರೂ.ನ್ನು ಅಸೋಸಿಯೇಶನ್ ವತಿ ಯಿಂದ ನೀಡುವುದಾಗಿ ಸ್ಥಾಪಕಾಧ್ಯಕ್ಷ ಹಾಜಿ ಎಸ್.ಎಂ. ರಶೀದ್ ಹಾಜಿ ಘೋಷಿಸಿದರು. ದ.ಕ. ಮುಸ್ಲಿಮ್ ಅಸೋಸಿಯೇಶನ್‌ನ ಫಲಾನುಭವಿ ಸದಸ್ಯರಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿ ದ್ದರೂ, ಮಾನವೀಯ ನೆಲೆಯಲ್ಲಿ ಹಾಗೂ ವಿಶೇಷ ಪ್ರಕರಣವೆಂದು ಪರಿಗಣಿಸಿ ಯೋಜನೆಗೆ ಚಾಲನೆ ನೀಡು ತ್ತಿರುವ ಸಂದರ್ಭದಲ್ಲಿ ಈ ಸಹಾಯಹಸ್ತಕ್ಕೆ ಮುಂದಾ ಗಿರುವುದಾಗಿ ಅವರು ಹೇಳಿದರು