ಪ್ರಧಾನಿ ಪದ ತೊರೆಯುವುದು ಮಾತ್ರವಲ್ಲ ಜೈಲಿಗೂ ಹೋಗಬೇಕಾಗುವುದು ಎಂದು ಪಾಕ್ ಪ್ರಧಾನಿಗೆ ಹೇಳಿದ, ಇಮ್ರಾನ್ ಖಾನ್
ಇಸ್ಲಾಮಾ ಬಾದ್, ಮೆ 2: ಪಾಕಿಸ್ತಾನದ ತಹ್ರೀಕೆ ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್ ಪನಾಮ ಪೇಪರ್ಸ್ ಪ್ರಕರಣದ ತನಿಖೆಯಲ್ಲಿ ಭ್ರಷ್ಟಾಚಾರ ಆರೋಪ ಸಾಬೀತಾದರೆ ಪ್ರಧಾನ ಮಂತ್ರಿ ನವಾಝ್ ಶರೀಫ್ ಜೈಲಿಗೆ ಹೋಗಲಿದ್ದಾರೆ ಎಂದು ವರದಿಯಾಗಿದೆ. ಲಾಹೋರ್‌ನಲ್ಲಿ ಪಂಜಾಬ್ ಅಸೆಂಬ್ಲಿಯ ಹೊರಗೆ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತಾಡಿದ ಇಮ್ರಾನ್ ಖಾನ್ ಒಂದುವೇಳೆ ಪನಾಮ ಪೇಪರ್ಸ್‌ನ ತನಿಖೆಯಲ್ಲಿ ಒಂದು ವೇಳೆ ನವಾಝ್ ಶರೀಫ್ ತಪ್ಪಿತಸ್ಥ ಎಂದು ಸಾಬೀತುಗೊಂಡರೆ ಅವರು ಕೇವಲಪ್ರಧಾನಿ ಸ್ಥಾನಕ್ಕೆ ರಾಜಿನಾಮೆಯನ್ನು ಮಾತ್ರ ನೀಡಬೇಕಾಗುವುದಲ್ಲ. ಜೈಲಿಗೂ ಹೋಗಲಿದ್ದಾರೆ ಎಂದು ಹೇಳಿರುವುದಾಗಿ ವರದಿಯಾಗಿದೆ.
ಇಮ್ರಾನ್ ಖಾನ್ ಪ್ರತಿಕ್ರಿಯಿಸುತ್ತಾ" ಮಿಯಾಂ ಸಾಹೇಬ್‌ರು ಹೇಳಿದ್ದಾರೆ ತನಿಖೆ ಆಯೋಗದ ವಿಚಾರಣೆಯಲ್ಲಿ ತಪ್ಪಿತಸ್ಥನೆಂದು ಕಂಡು ಬಂದರೆ ಪ್ರಧಾನಿ ಸ್ಥಾನಕ್ಕೆ ರಾಜಿನಾಮೆ ನೀಡುವೆ ಎಂದು ಹೇಳಿದ್ದಾರೆ.ನಿಮಗೆ ಕೇವಲ ಪ್ರಧಾನಿ ಪದವನ್ನು ಮಾತ್ರ ತೊರೆಯಬೇಕಾಗಿ ಬರುವುದಲ್ಲ. ಜೈಲಿಗೂ ಹೋಗಬೇಕಾಗುತ್ತದೆ" ಎಂದು ನವಾಝ್ ಶರೀಫ್‌ರನ್ನ ಕುರಿತು ಹೇಳಿರುವುದಾಗಿ ವರದಿಯಾಗಿದೆ. ಪನಾಮ ಪೇಪರ್ಸ್ ಲೀಕ್‌ನಲಿ ನವಾಝ್ ಶರೀಫ್‌ರ ಹೆಸರು ಉಲ್ಲೇಖಗೊಂಡಿದ್ದು ಅವರ ಮೇಲೆ ಭ್ರಷ್ಟಾಚಾರ ಆರೋಪವನ್ನು ಹೊರಿಸಲಾಗಿದೆ. ಆದರೆ ಈ ಆರೋಪವನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ ಎಂದು ವರದಿಗಳು ತಳಿಸಿವೆ