ಗುಂಡು ಹಾರಿಸಿಕೊಂಡು ವೃದ್ಧ ಆತ್ಮಹತ್ಯೆ
Update: 2016-05-02 19:04 IST
ಸುಳ್ಯ, ಮೇ 2: ದೇವಚಳ್ಳ ಗ್ರಾಮದ ಎಲಿಮಲೆ ಬಳಿಯ ಗುಡ್ಡೆ ಎಂಬಲ್ಲಿ ಚೋಮಣ್ಣ ಗೌಡ ಎಂಬವರು ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
80 ವರ್ಷ ಪ್ರಾಯದ ಚೋಮಣ್ಣ ಗೌಡರು ರವಿವಾರ ರಾತ್ರಿ ವೇಳೆಗೆ ಮನೆಯ ಪಕ್ಕದ ಅಡಿಕೆ ಸಂಗ್ರಹಿಸಿಡುವ ಕೊಠಡಿಯಲ್ಲಿ ಹೊಟ್ಟೆಗೆ ಕೋವಿಯ ನಳಿಗೆಂುನ್ನಿಟ್ಟುಕೊಂಡು ಕಾಲಲ್ಲಿ ಟ್ರಿಗರ್ ಒತ್ತಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.