×
Ad

16 ವರ್ಷಗಳ ಹಿಂದೆ ಕೊಚ್ಚಿ ಹೋಗಿದ್ದ ಇಬ್ಬರ ಮೃತದೇಹ ಪತ್ತೆ

Update: 2016-05-02 22:30 IST

ಲಾಸ್ ಏಂಜಲಿಸ್, ಮೇ 2: ಹದಿನಾರು ವರ್ಷಗಳ ಹಿಂದೆ ಹಿಮಾಲಯದ ನೀರ್ಗಲ್ಲಿನಲ್ಲಿ ಕೊಚ್ಚಿ ಹೋಗಿದ್ದ ಪ್ರಸಿದ್ಧ ಪರ್ವತಾರೋಹಿ ಅಲೆಕ್ಸ್ ಲೋವ್ ಮತ್ತು ಸಂಶೋಧನಾ ಕ್ಯಾಮರಾಮನ್ ಡೇವಿಡ್ ಬ್ರಿಜಸ್ ಅವರ ಮೃತದೇಹಗಳು ಪತ್ತೆಯಾಗಿವೆ.

ಟಿಬೆಟ್‌ನಲ್ಲಿ ಶೀಶಪಂಗ್ಮ ಪರ್ವತವನ್ನು ಹತ್ತಲು ಪ್ರಯತ್ನಿಸುತ್ತಿದ್ದ ಇಬ್ಬರು ಪರ್ವತಾರೋಹಿಗಳು ಇಬ್ಬರ ಮೃತದೇಹಗಳನ್ನು ಪತ್ತೆಹಚ್ಚಿದ್ದಾರೆ ಎಂದು ಅಲೆಕ್ಸ್ ಲೋವ್‌ರ ಪತ್ನಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

1999ರ ಅಕ್ಟೋಬರ್‌ನಲ್ಲಿ ನೀರ್ಗಲ್ಲು ಉರುಳಿ ಅವರಿಬ್ಬರು ಮೃತಪಟ್ಟಿದ್ದರು. ಅವರ ಜೊತೆಗೆ ಹೋಗಿದ್ದ ಕಾನ್ರಾಂಡ್ ಆ್ಯಂಕರ್ ಈ ದುರ್ಘಟನೆಯಲ್ಲಿ ಬದುಕು ಉಳಿದಿದ್ದರು. ಮೃತರ ಬಟ್ಟೆಗಳು ಮತ್ತು ಬೆನ್ನಿಗೆ ಹಾಕಿಕೊಂಡಿದ್ದ ಚೀಲಗಳ ಮಾಹಿತಿಯನ್ನು ಪರ್ವತಾರೋಹಿಗಳು ಆ್ಯಂಕರ್‌ಗೆ ವಿವರಿಸಿದರು. ಈ ವಿವರಗಳ ಆಧಾರದಲ್ಲಿ, ಆ ದೇಹಗಳು ಬ್ರಿಜಸ್ ಮತ್ತು ಲೋವ್ ಅವರದ್ದು ಎಂಬ ತೀರ್ಮಾನಕ್ಕೆ ಆ್ಯಂಕರ್ ಬಂದರು ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News