×
Ad

ಭಟ್ಕಳ: ಯಕ್ಷಗಾನ ನೃತ್ಯಾಭ್ಯಾಸಕ್ಕೆ ಚಾಲನೆ

Update: 2016-05-02 22:47 IST

ಭಟ್ಕಳ, ಮೇ 2: ಮುರ್ಡೇಶ್ವರ ಗ್ರಾಮೀಣ ಶಿಕ್ಷಣ ಪ್ರತಿಷ್ಠಾನ ಮತ್ತು ಯಕ್ಷರಕ್ಷೆ (ರಿ) ಮುರ್ಡೇಶ್ವರದ ಸಹಯೋಗದೊಂದಿಗೆ ಶಾಲಾ ಮಕ್ಕಳಿಗೆ ಬೇಸಿಗೆ ಶಿಬಿರದ ಪ್ರಯುಕ್ತ ನಡೆಯುವ ಉಚಿತ ಯಕ್ಷಗಾನ ನೃತ್ಯಾಭ್ಯಾಸ ಕಾರ್ಯಕ್ರಮ ಇಂದು ಉದ್ಘಾಟನೆಗೊಂಡಿತು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಐ.ಆರ್.ಭಟ್, ಪ್ರತಿಷ್ಠಾನದ ಉಪನ್ಯಾಸಕ ಕೃಷ್ಣ ಹೆಗಡೆ, ನಿವೃತ್ತ ಶಿಕ್ಷಕಿ ಚಂದ್ರಕಲಾ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

ಯಕ್ಷಗಾನ ತರಬೇತಿಯು ಮುರ್ಡೇಶ್ವರ ಗ್ರಾಮೀಣ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಸ್.ಎಸ್. ಕಾಮತ್ ನೇತೃತ್ವದಲ್ಲಿ ಯಕ್ಷಗಾನ ಕಲಾವಿದ, ಉಪನ್ಯಾಸಕ ಗಣಪತಿ ಕಾಯ್ಕಿಣಿ ಮಾರ್ಗದರ್ಶನದಲ್ಲಿ ಒಂದು ತಿಂಗಳ ಕಾಲ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News