ಭಟ್ಕಳ: ಜೆ.ಇ.ಇ. ಪರೀಕ್ಷೆಯಲ್ಲಿ ಸಿದ್ಧಾರ್ಥ ಕಾಲೇಜಿನ ವಿದ್ಯಾರ್ಥಿಗಳು ಉತ್ತೀರ್ಣ
Update: 2016-05-02 22:56 IST
ಭಟ್ಕಳ, ಮೇ 2: ಇಲ್ಲಿನ ಸಿದ್ಧಾರ್ಥ ಪಿ.ಯು. ಕಾಲೇಜಿನ 6 ಮಂದಿ ವಿದ್ಯಾರ್ಥಿಗಳು ಜೆ.ಇ.ಇ.(ಮೈನ್ಸ್) ಪರೀಕ್ಷೆಯಲ್ಲಿ ಉತ್ತಿೀರ್ಣರಾಗಿ ಉತ್ತಮ ಸಾಧನೆ ಮಾಡಿದ್ದಾರೆ.
ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿಗಳಾದ ನಮೃತಾ ಎಸ್., ಪ್ರಜ್ಞಾ ಎ. ನಾಯ್ಕ, ಸುಸ್ಮಿತಾ ಗೊಂಡ, ನಾಗರಾಜ ದೇವಾಡಿಗ, ಚೇತನಾ ಸಿ. ಕಾಮತ್, ವಿನುತಾ ಎಸ್. ಮೊಗೇರ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದಿದ್ದು, ವಿದ್ಯಾರ್ಥಿಗಳನ್ನು ಸಿದ್ಧಾರ್ಥ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷ ಕ್ಯಾಪ್ಟನ್ ಕೆ. ಆರ್. ನಾಯ್ಕ, ಕಾರ್ಯದರ್ಶಿ ಅರ್ಚನಾ, ಪ್ರಾಂಶುಪಾಲ ಹೆಗಡೆ ಅಭಿನಂದಿಸಿದ್ದಾರೆ.