×
Ad

ಅರ್ಜಿ ಅಹ್ವಾನ

Update: 2016-05-02 23:22 IST

ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ
 ಮಂಗಳೂರು, ಮೇ 2: ದೌರ್ಜನ್ಯಕ್ಕೆ ಒಳಗಾದ, ಅತ್ಯಾಚಾರಕ್ಕೆ ಒಳಗಾದ ಅಥವಾ ಕಷ್ಟದಲ್ಲಿರುವ ಮಹಿಳೆಯರಿಗೆ ಅಗತ್ಯ ಸಹಾಯವನ್ನು ನೀಡಲು ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರವನ್ನು ಬಂಟ್ವಾಳ ತಾಲೂಕಿನ ಬಿ.ಸಿ ರೋಡ್‌ನಲ್ಲಿ ಪ್ರಾರಂಭಿಸಲು ಆಸಕ್ತಿಯುಳ್ಳ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಮೇ 6 ರೊಳಗೆ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ. ಜಿಪಂ ಕಟ್ಟಡ, ಮಂಗಳೂರು, ದೂ.ಸಂ: 0824-2451254 ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ಸವಿತಾ ಸಮಾಜ ಬಾಂಧವರಿಗೆ
 
ಮಂಗಳೂರು, ಮೇ 2: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2016-17ನೆ ಸಾಲಿಗೆ ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ ಪಾರಂಪರಿಕ ಕಲೆಗಳಾದ ಡೋಲು ಮತ್ತು ನಾದಸ್ವರ ಸಂಗೀತ ಕಲೆಗಳಲ್ಲಿ 4 ವರ್ಷದ ತರಬೇತಿಯನ್ನು ಉಚಿತ ಊಟ, ವಸತಿ, ಶಿಕ್ಷಣ ಮತ್ತು ತರಬೇತಿ ಭತ್ತೆಯೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನೀಡಲಾಗುವುದು. ಸವಿತಾ ಸಮಾಜದ ಆಸಕ್ತ ವಿದ್ಯಾರ್ಥಿಗಳು ಅರ್ಜಿ ನಮೂನೆಯನ್ನು ಆಯಾ ಜಿಲ್ಲೆಯ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಪಡೆದು ಭರ್ತಿ ಮಾಡಿ ಮೇ 16 ರೊಳಗಾಗಿ ಆಯಾ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಚೇರಿಗೆ ಸಲ್ಲಿಸಬಹುದು. ಮಾಹಿತಿಗಾಗಿ ಇಲಾಖಾ ವೆಬ್‌ಸೈಟ್ ಡಿಡಿಡಿ.ಚಿಚ್ಚಡಿಚ್ಟಛ್ಚ್ಝಛಿ.ಚ್ಟ.್ಞಜ್ಚಿ.ಜ್ಞಿ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ವಿಶ್ವಕರ್ಮ ಸಮಾಜದ ಬಾಂಧವರಿಗೆ
 ಮಂಗಳೂರು, ಮೇ 2: ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ವಿಶ್ವಕರ್ಮ ಸಮುದಾಯ ಜನರ ಆರ್ಥಿಕ ಅಭಿವೃದ್ಧಿಗಾಗಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಅಭಿವೃದ್ಧಿ ನಿಗಮ ಹೊಸದಿಲ್ಲಿ ಇವರ ಸಹಯೋಗದೊಂದಿಗೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ನಿಗಮದ ಸೌಲಭ್ಯ ಪಡೆಯಲು ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ.


ಆಸಕ್ತರು ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ (ನಿ), ರೇಡಿಯೋ ಪಾರ್ಕ್, ಉರ್ವಸ್ಟೋರ್, ಮಂಗಳೂರು ಇಲ್ಲಿ ಅಥವಾ ಆಯಾ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳ ಕಚೇರಿಯಲ್ಲಿ ನಿಗದಿತ ನಮೂನೆಯ ಅರ್ಜಿಯನ್ನು ಪಡೆದು ಮೇ 13ರೊಳಗೆ ಈ ಜಿಲ್ಲಾ ಕಚೇರಿಗೆ ಸಲ್ಲಿಸಬಹುದು ಎಂದು ಪ್ರಕಟನೆ ತಿಳಿಸಿದೆ. ಡಿಪ್ಲೊಮಾ ಇನ್ ಪ್ಲಾಸ್ಟಿಕ್ ಕೋರ್ಸ್

ಮಂಗಳೂರು, ಮೇ 2: ಸಿಪೆಟ್ ಮೈಸೂರು ಸಂಸ್ಥೆಯು ನಡೆಸುವ 3 ವರ್ಷಗಳ ಡಿಪ್ಲೊಮಾ ಇನ್ ಪ್ಲಾಸ್ಟಿಕ್ ಟೆಕ್ನಾಲಜಿ ಮತ್ತು ಪ್ಲಾಸ್ಟಿಕ್ ಮೌಲ್ಡ್ ಟೆಕ್ನಾಲಜಿ ಕೋರ್ಸ್ ಅನ್ನು ಕರ್ನಾಟಕ ತಾಂತ್ರಿಕ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಡಿಪ್ಲೊಮಾ ಇನ್ ಪಾಲಿಮರ್ ಟೆಕ್ನಾಲಜಿ ಕೋರ್ಸ್‌ಗೆ ತತ್ಸಮವಾಗಿ ಪರಿಗಣಿಸಿದೆ ಮತ್ತು ಲ್ಯಾಟರರ್ ಎಂಟ್ರಿ ಮೂಲಕ ಬಿ.ಇ. ವ್ಯಾಸಂಗ ಮಾಡಬಹುದಾಗಿದೆ.
ಪ್ಲಾಸ್ಟಿಕ್ ತಂತ್ರಜ್ಞಾನ ಸಂಸ್ಥೆಯಲ್ಲಿ 2016-17ನೆ ಸಾಲಿಗೆ ಪ್ರವೇಶ ಹೊಂದಲು ಅರ್ಜಿಯನ್ನು ಸ್ಥಳೀಯ ಅಭ್ಯರ್ಥಿಗಳು ನೇರವಾಗಿ ಸಿಪೆಟ್, ಹೆಬ್ಬಾಳ್ ಕೈಗಾರಿಕಾ ಪ್ರದೇಶ, ಮೈಸೂರು-16 ಇಲ್ಲಿ ಖುದ್ದಾಗಿ ಪಡೆಯಬಹುದು. ಆನ್‌ಲೈನ್ ವೆಬ್‌ಸೈಟ್ ಡಿಡಿಡಿ.್ಚಜಿಛಿಠಿಟ್ಞ್ಝಜ್ಞಿಛಿ.್ಚಟ.ಜ್ಞಿನಲ್ಲೂ ಅರ್ಜಿ ಸಲ್ಲಿಸಬಹುದಾಗಿದೆ. ಮಾಹಿತಿಗಾಗಿ ಕೇಂದ್ರೀಯ ಪ್ಲಾಸ್ಟಿಕ್ ತಂತ್ರಜ್ಞಾನ ಸಂಸ್ಥೆ (ಸಿಪೆಟ್), ನಂ. 437/ಎ, ಹೆಬ್ಬಾಳ್ ಕೈಗರಿಕಾ ಪ್ರದೇಶ, ಮೈಸೂರು -570016 ದೂ. 0821-2516322 /7760684570 ಇ-ಮೇಲ್ ಞಟ್ಟಛಿಃ್ಚಜಿಛಿಠಿ.ಜಟ.ಜ್ಞಿ ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.


ವಿದ್ಯಾರ್ಥಿನಿಲಯಗಳ ಸೇರ್ಪಡೆ

ಮಂಗಳೂರು, ಮೇ 2: ತಾಲೂಕಿನಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯಗಳಾದ ಕದ್ರಿ, ಕೂಳೂರು, ಮುಲ್ಕಿ, ಮೂಡುಬಿದಿರೆ, ಕಡಂದಲೆ, ಸುಂಕದಕಟ್ಟೆ, ದರೆಗುಡ್ಡೆ ಹಾಗೂ ಬಾಲಕಿಯರ ವಿದ್ಯಾರ್ಥಿನಿಲಯಗಳಾದ ಗುರುಪುರ, ಅಶೋಕನಗರ, ಗುರುಕಂಬಳ ಇಲ್ಲಿಗೆ ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಂದ ನಿಲಯಗಳ ಸೇರ್ಪಡೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿ, ತಾಪಂ ಕಟ್ಟಡ, ಮಂಗಳೂರು ಅಥವಾ ಸಂಬಂಧಿಸಿದ ವಿದ್ಯಾರ್ಥಿ ನಿಲಯಗಳಿಂದ ಪಡೆದು ಮೇ 25ರೊಳಗೆ ಸಲ್ಲಿಸಬಹುದು.


ಸಾಕ್ಷ್ಯಚಿತ್ರ ನಿರ್ಮಾಣ
ಉಡುಪಿ, ಮೇ 2: ಕರ್ನಾಟಕ ಜಾನಪದ ಅಕಾಡಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ 2015-16ನೆ ಸಾಲಿನಲ್ಲಿ ಅಕಾಡಮಿ ರಾಜ್ಯೋತ್ಸವ, ಜಾನಪದಶ್ರೀ ಪ್ರಶಸ್ತಿ ಪಡೆದಿರುವ ಅಲ್ಲದೆ ಹಿರಿಯ ಪರಿಶಿಷ್ಟ ಪಂಗಡದ ಜಾನಪದ ಕಲಾವಿದರ ಸಾಕ್ಷ್ಯಚಿತ್ರ (ಡಿಜಿಟಲ್ ಆತ್ಮಕಥನ) ನಿರ್ಮಾಣದ ಯೋಜನೆಯನ್ನು ಹಮ್ಮಿಕೊಂಡಿದೆ.
ಸಾಕ್ಷ್ಯಚಿತ್ರ ನಿರ್ಮಾಣಕ್ಕಾಗಿ ನಿರ್ದೇಶನ, ತಾಂತ್ರಿಕ ಪರಿಣಿತಿ ಹೊಂದಿರುವ ಪರಿಶಿಷ್ಟ ಪಂಗಡಕ್ಕೆ ಸೇರಿದ ನಿರ್ದೇಶಕರಿಂದ ಅವರ ಅನುಭವದ ಮಾಹಿತಿಗಳೊಂದಿಗೆ ಮೇ 10ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಆಯಾ ಜಿಲ್ಲೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಅಥವಾ ಬೆಂಗಳೂರಿನ ಕರ್ನಾಟಕ ಜಾನಪದ ಅಕಾಡಮಿ ಕಚೇರಿಯಿಂದ ಪಡೆಯಬಹುದು. ಮಾಹಿತಿಗಾಗಿ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡಮಿ, ಕನ್ನಡ ಭವನ, 2ನೆ ಮಹಡಿ, ಜೆ.ಸಿ ರಸ್ತೆ ಬೆಂಗಳೂರು-2 ಇಲ್ಲಿಂದ ಪಡೆಯಬಹುದು. ಮಾಹಿತಿಗೆ ದೂ.ಸಂ.:080-22215509ನ್ನು ಸಂಪರ್ಕಿಸಲು ಅಕಾಡಮಿಯ ರಿಜಿಸ್ಟ್ರಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News