×
Ad

ಕುಕ್ಕೇಡಿ: ಅಂಬೇಡ್ಕರ್ ಭವನ ಉದ್ಘಾಟನೆ

Update: 2016-05-02 23:28 IST


ಬೆಳ್ತಂಗಡಿ, ಮೇ 2: ದಲಿತ ಸಮುದಾಯದ ಅಭಿವೃದ್ಧಿಗಾಗಿ ಸರಕಾರ ವಿವಿಧ ಯೋಜನೆಗಳನ್ನು ರೂಪಿಸಿದೆ. ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಅತಿ ಹೆಚ್ಚಿನ ಅನುದಾನಗಳು ಬಂದಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಬೆಳ್ತಂಗಡಿಯಲ್ಲಿ 1.5 ಕೋಟಿ ವೆಚ್ಚದಲ್ಲಿ ಹಾಗೂ ಹೋಬಳಿ ಕೇಂದ್ರಗಳಾದ ವೇಣೂರು ಹಾಗೂ ಕೊಕ್ಕಡದಲ್ಲಿ ತಲಾ 50 ಲಕ್ಷ ರೂ. ವೆಚ್ಚದ ಅಂಬೇಡ್ಕರ್ ಭವನಗಳು ಮಂಜೂರಾಗಿವೆೆ ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು. ಕುಕ್ಕೇಡಿಯಲ್ಲಿ ದ.ಕ. ಜಿಪಂ, ತಾಪಂ ಬೆಳ್ತಂಗಡಿ, ಪಂಚಾಯತು ರಾಜ್ ಇಂಜಿನಿಯರಿಂಗ್ ಉಪವಿಭಾಗ ಬೆಳ್ತಂಗಡಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಬೆಳ್ತಂಗಡಿ ಹಾಗೂ ಗ್ರಾಪಂ ಕುಕ್ಕೇಡಿ ಇದರ ಸಹಯೋಗದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಂಬೇಡ್ಕರ್ ಭವನ ಉದ್ಘಾಟಿಸಿ ಅವರು ಮಾತನಾಡಿದರು. ಕುಕ್ಕೇಡಿ ಗ್ರಾಪಂ ಅಧ್ಯಕ್ಷೆ ತೇಜಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಶೇಖರ ಕುಕ್ಕೇಡಿ, ಎಪಿಎಂಸಿ ಅಧ್ಯಕ್ಷ, ಧರಣೇಂದ್ರ ಕುಮಾರ್, ತಾಪಂ ಸದಸ್ಯೆಯರಾದ ಸುಶೀಲಾ, ವಿನುಷಾ, ಜಿಪಂ ಇಂಜಿನಿಯರಿಂಗ್‌ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಿ.ಆರ್. ನರೇಂದ್ರ, ನಿರ್ಮಿತಿ ಕೇಂದ್ರದ ಇಂಜಿನಿಯರ್ ನವೀನ್ ಕುಮಾರ್, ಪಿಡಿಒ ರಶ್ಮಿ ಬಿ.ಪಿ. ಉಪಸ್ಥಿತರಿ ದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News