×
Ad

ನೇತ್ರಾವತಿ ಒಡಲಿಗೆ ಬೆಂಕಿ

Update: 2016-05-03 14:16 IST

ಬಂಟ್ವಾಳ, ಮೇ 3: ನೀರಿಲ್ಲದೆ ಬರಿದಾಗಿರುವ ನೇತ್ರಾವತಿ ನದಿಯ ಒಡಲಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಇಂದು ನಡೆದಿದೆ.

ಪಾಣೆಮಂಗಳೂರಿನ ಕಂಚಿಕಾರ ಪೇಟೆ ಬಳಿ ನೇತ್ರಾವತಿ ನೀರು ಬರಿದಾಗಿದ್ದು, ಅಲ್ಲಿ ಕಾಣಿಸಿಕೊಳ್ಳುತ್ತಿರುವ ಮರಳಿನಲ್ಲಿ ಬೆಳೆದಿರುವ ಹುಲ್ಲಿನ ರಾಶಿಗೆ ದುಷ್ಕರ್ಮಿಗಳು ಬೆಂಕಿ ಕೊಟ್ಟಿದ್ದಾರೆ. ಈ ಭಾಗದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಮರಳು ದಂಧೆಕೋರರು ಇಲ್ಲಿ ಮರಳು ಗಾರಿಕೆ ನಡೆಸುವ ನಿಟ್ಟಿನಲ್ಲಿ ಹುಲ್ಲಿಗೆ ಬೆಂಕಿ ಕೊಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News