ಮುಲ್ಕಿ: ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯ ಬಂಧನ
Update: 2016-05-03 16:51 IST
ಮುಲ್ಕಿ, ಮೇ 3: ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ವ್ಯಕ್ತಿಯೊರ್ವನನ್ನು ಮುಲ್ಕಿ ಪೊಲೀಸರು ಮಂಗಳವಾರ ರಾತ್ರಿ ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.
ಕಿನ್ನಿಕಂಬ್ಳ ಮೂಡುಪೆರಾರ ನಿವಾಸಿ ಪುರುಷೋತ್ತಮ (49) ಬಂಧಿತ ವ್ಯಕ್ತಿ.
ಮಂಗಳವಾರ ತಡರಾತ್ರಿ ಮೆನ್ನೆಟ್ಟು ಮಾರಡ್ಕ ಮಾರಿಗುಡಿಯ ಬಳಿ ಸಂಶಯಾಸ್ಪದವಾಗಿ ಸುತ್ತಾಡುತ್ತಿದ್ದ ಪುರುಷೋತ್ತಮನನ್ನು ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರು ಗಮನಿಸಿ ವಿಚಾರಿಸಿದ್ದು, ಸರಿಯಾದ ಕಾರಣ ನೀಡದ ಹಿನ್ನೆಲೆಯಲ್ಲಿ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.