×
Ad

‘ಉತ್ಸಾಹಿ-ವರುಣ್ ಟ್ರೋಫಿ’ ಕಬಡ್ಡಿ ಪಂದ್ಯಾಟ: ವರುಣ್ ಟ್ರಾವೆಲ್ಸ್ ತಂಡ ಪ್ರಥಮ

Update: 2016-05-03 18:45 IST

ಬೆಳ್ತಂಗಡಿ, ಮೇ 3: ಲಾಲ ಪಡ್ಲಾಡಿ ಶಾಲಾ ವಠಾರದಲ್ಲಿ ಉತ್ಸಾಹಿ ಯುವಕ ಮಂಡಲ ಲಾಲ ಮತ್ತು ವರುಣ್ ಟ್ರಾವೆಲ್ಸ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ನ ಸಹಭಾಗಿತ್ವದಲ್ಲಿ ನಡೆದ ದ.ಕ., ಉಡುಪಿ ಹಾಗೂ ಕೊಡಗು ಅಂತರ್ ಜಿಲ್ಲಾಮಟ್ಟದ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಬೆಳ್ತಂಗಡಿ ವರುಣ್ ಟ್ರಾವೆಲ್ಸ್ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತು.

ಕೊಡಗು ಜಿಲ್ಲೆಯ ಕುಶಾಲನಗರದ ಜೆಬಿಎಸ್‌ಸಿ ತಂಡ ದ್ವಿತೀಯ ಸ್ಥಾನ ಪಡೆಯಿತು.

ಮೂರು ಜಿಲ್ಲೆಗಳಿಂದ ಆಗಮಿಸಿದ ಒಟ್ಟು 21 ತಂಡಗಳು ಭಾಗವಹಿಸಿದ್ದವು. ತೃತೀಯ ಸ್ಥಾನವನ್ನು ವೈಸಿಎಸ್‌ಸಿ ಮುಂಡಾಜೆ ಗಳಿಸಿದರೆ, ಆಳ್ವಾಸ್ ಮೂಡಬಿದಿರೆ ಚತುರ್ಥ ಸ್ಥಾನ ಪಡೆಯಿತು.

ಪಂದ್ಯಾಟವನ್ನು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ರಂಜನ್ ಜಿ. ಗೌಡ ಉದ್ಘಾಟಿಸಿದರು.

ಉದ್ಯಮಿ ಪಾಂಡುರಂಗ ಭಂಡಾರ್ಕರ್, ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ನ ಉಪಾಧ್ಯಕ್ಷ ನಾಮದೇವ ರಾವ್ ಮುಂಡಾಜೆ, ತಾಲೂಕು ಕಾರ್ಯದರ್ಶಿ ರಾಜಶೇಖರ ಶೆಟ್ಟಿ, ತಾಪಂ ಸದಸ್ಯ ಸುಧಾಕರ ಬಿ.ಎಲ್., ಜಿಲ್ಲಾ ತೀರ್ಪುಗಾರರ ಮಂಡಳಿ ಸಂಚಾಲಕ ಫ್ರಾನ್ಸಿಸ್ ವಿ.ವಿ., ಎಸ್‌ಡಿಎಂಸಿ ಅಧ್ಯಕ್ಷ ನಿರಂಜನ್ ಜೈನ್, ಉತ್ಸಾಹಿ ಯುವಕ ಮಂಡಲ ಅಧ್ಯಕ್ಷ ಹರೀಶ್ ಎಲ್., ಕಾರ್ಯಕ್ರಮ ಸಂಯೋಜನಾಧ್ಯಕ್ಷ ಗಿರೀಶ್ ಡೋಂಗ್ರೆ, ಗೌರವಾಧ್ಯಕ್ಷ ವಿಲ್ಸನ್ ಸೋನ್ಸ್, ಕಾರ್ಯಾಧ್ಯಕ್ಷ ವಿಜಯ ಫೆರ್ನಾಂಡಿಸ್, ಕಾರ್ಯದರ್ಶಿ ದಿನಕರ ಗೌಡ, ಕೋಶಾಧಿಕಾರಿ ಶ್ರೀ ಧರ್ ಆರ್., ಸಂಚಾಲಕ ರಾಜೇಶ್ ಶೆಟ್ಟಿ, ಸಹ ಸಂಚಾಲಕ ಶಶಿಧರ ಪೈ, ರಮೇಶ್, ತಾಂತ್ರಿಕ ಸಮಿತಿ ಸಂಚಾಲಕರಾದ ಜಯರಾಜ್ ಜೈನ್, ಮಹೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ, ಏಕಲವ್ಯ ಪ್ರಶಸ್ತಿ ವಿಜೇತ ಉದಯ ಚೌಟ, ಸಮಾಜ ಸೇವಕ ರುಕ್ಮಯ್ಯ ಕನ್ನಾಜೆ, ಉರಗಪ್ರೇಮಿ ಅಶೋಕ ನಿನ್ನಿಕಲ್, ತುಳು ಚಲನಚಿತ್ರ ನಟ ಚೇತನ್ ರೈ ಮಾಣಿ, ಹಿರಿಯ ಕಬಡ್ಡಿ ಆಟಗಾರ ಡ್ಯಾನಿ, ಜ್ಯೂ.ರಾಷ್ಟ್ರೀಯ ಆಟಗಾರರಾದ ಮುಹಮ್ಮದ್ ಅಕ್ರಮ್, ಮುಹಮ್ಮದ್ ಸಿನಾನ್, ನಶಾದುದ್ದೀನ್‌ರನ್ನು ಸನ್ಮಾನಿಸಲಾಯಿತು.

ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸರಿಗಮಪ ಲಿಟ್ಲ್ ಚಾಂಪ್ಸ್ ಖ್ಯಾತಿಯ ಅನನ್ಯ ಭಟ್ ಉಜಿರೆ ಮತ್ತು ತಂಡದಿಂದ ರಸಮಂಜರಿ ಕಾರ್ಯಕ್ರಮ, ಬಳಿಕ ನಮ್ಮ ಕಲಾವಿದೆರ್ ಬೆದ್ರ ತಂಡದಿಂದ ತುಳು ಹಾಸ್ಯಮಯ ನಾಟಕ ‘ನೆಟ್‌ವರ್ಕ್ ತಿಕ್ಕುಜಿ’ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News