ಬೆಳ್ತಂಗಡಿ: ನಿರಾಸೆ ಮೂಡಿಸಿದ ಮಳೆರಾಯ
Update: 2016-05-03 20:33 IST
ಬೆಳ್ತಂಗಡಿ, ಮೇ 3: ತಾಲೂಕಿನ ಕೆಲವು ಪ್ರದೇಶಗಳಲ್ಲಿ ಮಂಗಳವಾರ ಸಂಜೆಯ ವೇಳೆ ಸುರಿದ ತುಂತುರು ಮಳೆ ಉರಿ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಒಂದಿಷ್ಟು ನೆಮ್ಮದಿ ಒದಗಿಸಿದೆ.
ಗುಡುಗು ಮಿಂಚಿನೊಂದಿಗೆ ಸುರಿಯಲಾರಂಭಿಸಿದ ಮಳೆಯು ಇನ್ನಷ್ಟು ಜೋರಾಗಿ ಸುರಿಯುವ ಸೂಚನೆ ನೀಡಿದರೂ ಅಂತಿಮವಾಗಿ ಜನರನ್ನು ನಿರಾಸೆಗೊಳಿಸಿತು.
ತಾಲೂಕಿನ ಕೊಕ್ಕಡ, ಧರ್ಮಸ್ಥಳ, ನಿಡ್ಲೆ, ಅರಸಿನಮಕ್ಕಿ, ಉಜಿರೆ, ಬೆಳ್ತಂಗಡಿ, ಗುರಿಪಳ್ಳ, ಮುಂಡಾಜೆ, ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಗುಡುಗು ಸಿಡಿಲಿನೊಂದಿಗೆ ಸಾಧಾರಣ ಮಳೆ ಸುರಿದಿದೆ.