ಕೊಲೆ ಯತ್ನ ಪ್ರಕರಣದ ಆರೋಪಿಗಳ ಸೆರೆ
Update: 2016-05-03 22:49 IST
ಮುಲ್ಕಿ, ಮೇ 3: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಪರಿಸರದಲ್ಲಿ ಭರತ್‌ರಾಜ್ ಎಂಬವರ ಕೊಲೆಯತ್ನ ನಡೆಸಿದ್ದರೆನ್ನಲಾದ ನಾಲ್ವರನ್ನು ಸುರತ್ಕಲ್ ಪೊಲೀಸರು ನಿನ್ನೆ ಮಧ್ಯರಾತ್ರಿ ಬಂಧಿಸಿದ್ದಾರೆ.
ಕೃಷ್ಣಾಪುರ ನಿವಾಸಿಗಳಾದ ಅಬ್ದುಲ್ ಅಝೀಝ್, ರಿಝ್ವಾನ್, ಇರ್ಫಾನ್ ಹಾಗೂ ಸೂರಿಂಜೆ ನಿವಾಸಿ ಬರಕತ್ ಅಲಿ ಬಂಧಿತ ಆರೋಪಿಗಳು.
ಆರೋಪಿಗಳು ಪಡುಬಿದ್ರೆಯ ಎಸ್‌ಎಸ್ ಲಾಡ್ಜ್‌ನಲ್ಲಿ ವಾಸವಾಗಿರುವ ಬಗ್ಗೆ ಮಾಹಿತಿ ಕಲೆಹಾಕಿದ ಸುರತ್ಕಲ್ ಠಾಣಾ ಪೊಲೀಸರು ನಿನ್ನೆ ಮಧ್ಯರಾತ್ರಿ ಲಾಡ್ಜಿಗೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಕೆಲದಿನಗಳ ಹಿಂದೆ ಸ್ಕಾರ್ಪಿಯೋ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಸುರತ್ಕಲ್ ನಿವಾಸಿ ಭರತ್‌ರಾಜ್ ಎಂಬವರಿಗೆ ಚೂರಿ ಹಾಗೂ ತಲವಾರುಗಳಿಂದ ಇರಿದು ಪರಾರಿಯಾಗಿದ್ದರು.