ರಾಮದೇವ್ ಫುಡ್ ಪಾರ್ಕ್‌ಗೆ ಸಿಐಎಸ್‌ಎಫ್ ಭದ್ರತೆ ನೀಡಿರುವುದು ವಿಶೇಷ ಕೃಪೆಯಲ್ಲ: ರಿಜಿಜು
ಹೊಸದಿಲ್ಲಿ,ಮೇ 3: ರಾಮದೇವ್ ಅವರ ಫುಡ್‌ಪಾರ್ಕ್ ಮತ್ತು ಇತರ ಖಾಸಗಿ ಸಂಸ್ಥೆಗಳಿಗೆ ಬೆದರಿಕೆಗಳಿರುವ ಹಿನ್ನೆಲೆಯಲ್ಲಿ ಸಿಐಎಸ್‌ಎಫ್ ರಕ್ಷಣೆಯನ್ನು ಒದಗಿಸಲಾಗಿದೆಯೇ ಹೊರತು ಅದು ವಿಶೇಷ ಕೃಪೆಯಲ್ಲ ಎಂದು ಸಹಾಯಕ ಗೃಹಸಚಿವ ಕಿರಣ್ ರಿಜಿಜು ಅವರು ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದರು.
ಪೂರಕ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಅವರು, ಹರಿದ್ವಾರದಲ್ಲಿರುವ ರಾಮದೇವ್‌ರ ಫುಡ್‌ಪಾರ್ಕ್‌ಗೆ ಸಿಐಎಸ್‌ಎಫ್ ಸಿಬ್ಬಂದಿಯ ‘ಅತ್ಯಂತ ಸಣ್ಣ ’ತುಕಡಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಖಾಸಗಿ ಸಂಸ್ಥೆಗಳಿಗೆ ಸಿಐಎಸ್‌ಎಫ್ ರಕ್ಷಣೆಯನ್ನು ಒದಗಿಸುವ ಮುನ್ನ ಗುಪ್ತಚರ ಸಂಸ್ಥೆಯಿಂದ ಬೇಹು ಮಾಹಿತಿ ಸೇರಿದಂತೆ ಎಲ್ಲ ನಿಗದಿತ ವಿಧಿವಿಧಾನಗಳನ್ನು ಪಾಲಿಸಲಾಗಿದೆ ಎಂದರು.
ಸಿಬ್ಬಂದಿಯ ಕೊರತೆಯಿಂದಾಗಿ ಕೆಲವು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ವಿಮಾನ ನಿಲ್ದಾಣಗಳಿಗೆ ಸಿಐಎಸ್‌ಎಫ್ ರಕ್ಷಣೆಯನ್ನು ಒದಗಿಸಲಾಗಿಲ್ಲ ಎಂಬ ಅಭಿಪ್ರಾಯಗಳನ್ನು ತಿರಸ್ಕರಿಸಿದ ಅವರು, ಇಂತಹ ಸ್ಥಳಗಳಿಗೆ ರಕ್ಷಣೆಯನ್ನು ಒದಗಿಸುವ ಮುನ್ನ ನಿಗದಿತ ನಿಯಮಾವಳಿಗಳನ್ನು ಅನುಸರಿಸಲಾಗುತ್ತದೆ.