×
Ad

‘ಸುಂದರ ಯುವತಿ’ಯ ನೆರವು ಪಡೆದ ವಾಯುಪಡೆಯ ಮುಖ್ಯಸ್ಥ ತ್ಯಾಗಿ !

Update: 2016-05-03 23:44 IST

ಹೊಸದಿಲ್ಲಿ, ಮೇ 3: ಮಾಜಿ ವಾಯುಪಡೆ ಮುಖ್ಯಸ್ಥ ಎಸ್ ಪಿ ತ್ಯಾಗಿ ಅವರಿಗೆ ಸುಂದರ ಯುವತಿ ಎಂಬ ಅರ್ಥ ನೀಡುವ ‘ಗಿಯುಲಿ’ ಎಂಬ ಇಟಾಲಿಯನ್ ಪದವನ್ನು ಸಂಕೇತನಾಮವನ್ನಾಗಿ ಯುರೋಪಿಯನ್ ಮಧ್ಯವರ್ತಿಗಳು ರೂ. 3,600 ಕೋಟಿ ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದಲ್ಲಿ ನೀಡಿದ್ದರೆಂದು ತನಿಖಾಕಾರರಿಗೆ ಸಿಕ್ಕಿರುವ ಟೇಪ್ ಸಂಭಾಷಣೆಗಳಿಂದ ಪತ್ತೆಯಾಗಿದೆಯೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ದಾಖಲೆಗಳು ತನಗೆ ದೊರೆತಿದೆಯೆಂದೂ ಪತ್ರಿಕೆ ಹೇಳಿಕೊಂಡಿದೆ.

ಗಿಯುಲಿ ಎಂಬ ಸಂಕೇತನಾಮವನ್ನು ಗಿಯುಲಿಯಾ ಎಂದೂ ಕೆಲವೊಮ್ಮೆ ಬಳಸಲಾಗಿದೆಯೆಂದು ತಿಳಿದು ಬಂದಿದೆ.
ಮಧ್ಯವರ್ತಿಗಳಾದ ಗುಯಿಡೊ ರಾಲ್ಫ್ ಹಸ್ಚಕೆ ಹಾಗೂ ಕಾರ್ಲೊ ಗೆರೊಸಾ ಇಬ್ಬರೂ ತ್ಯಾಗಿ ಅವರನ್ನು ತಮ್ಮ ಸಂಭಾಷಣೆಯಲ್ಲಿ ಗಿಯುಲಿ ಎಂಬ ಸಂಕೇತನಾಮದಿಂದ ಕರೆದಿದ್ದಾರೆ. ತ್ಯಾಗಿ ಅವರಿಬ್ಬರೊಂದಿಗೆ ಮಿಲಾನ್-ಮಲ್ಪೆನ್ಸಾ ವಿಮಾನ ನಿಲ್ದಾಣದಲ್ಲಿ ಮಾರ್ಚ್ 25,2012ರಂದು ತೆರಳಿದ್ದರು ಎಂದು ವರದಿ ತಿಳಿಸಿದೆ.
  ಇಟಲಿಯು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದೊಂದಿಗೆ ಹಂಚಿರುವ ಈ ಮುದ್ರಿತ ಸಂಭಾಷಣೆಗಳಲ್ಲಿ ಹೀಗೆಂದು ಹೇಳಲಾಗಿದೆ ‘‘25-03-2012ರಂದು ಹಸ್ಚಕೆ ಹಾಗೂ ಗೆರೊಸ ತ್ಯಾಗಿ (ಗಿಯುಲಿ)ಯೊಂದಿಗೆ ಮಿಲಾನ್ /ಮಲ್ಪೆನ್ಸಾ ವಿಮಾನ ನಿಲ್ದಾಣಕ್ಕೆ ಬಂದಿದ್ದು ತಮ್ಮ ರಿಟರ್ನ್ ಪ್ರಯಾಣದ ವೇಳೆ ಅವರಿಬ್ಬರೂ ಗಿಯುಲಿ ಇಟೆಲಿಯ ತನಿಖೆಯಿಂದ ಸಿಟ್ಟುಗೊಂಡಿದ್ದಾರೆಂಬುದನ್ನು ಒಪ್ಪಿಕೊಂಡರು.’’
ಆಗಸ್ಟಾ ಒಪ್ಪಂದದಲ್ಲಿನ ್ರಷ್ಟಾಚಾರದ ಆರೋಪಗಳ ಬಗ್ಗೆ ಇಟೆಲಿಯ ಏಜನ್ಸಿಗಳು ತನಿಖೆ ನಡೆಸುತ್ತಿರುವಾಗ ತ್ಯಾಗಿ ಮಿಲಾನ್ ಗೆ ಮಾರ್ಚ್ 2012ರಲ್ಲಿ ಭೇಟಿ ನೀಡಿದ ಬಗೆಗಿನ ದಾಖಲೆಗಳನ್ನೂ ಇಟೆಲಿ ಭಾರತದೊಂದಿಗೆ ಹಂಚಿಕೊಂಡಿದೆ. ಇಟಲಿ ಈ ಹಗರಣದ ತನಿಖೆಯನ್ನು 2011ರಿಂದ ನಡೆಸುತ್ತಿದೆ.
  ದಾಖಲೆಗಳ ಪ್ರಕಾರ ಇಬ್ಬರು ಮಧ್ಯವರ್ತಿಗಳು ತ್ಯಾಗಿ ಅವರನ್ನು ಭಾರತದಲ್ಲಿ 2004 ಹಾಗೂ 2007ರ ನಡುವೆ ಆರರಿಂದ ಏಳು ಬಾರಿ ಬೇಟಿಯಾಗಿದ್ದರು. ಕಳೆದ ತಿಂಗಳು ಇಟಲಿಯ ಕೋರ್ಟೊಂದು ತೀರ್ಪು ನೀಡುವ ವೇಳೆ ಇದನ್ನು ಉಲ್ಲೇಖಿಸಿದೆ.
 ತ್ಯಾಗಿ ಮಾರ್ಚ್ 31, 2007ರಲ್ಲಿ ತನ್ನ ನಿವೃತ್ತಿ ನಂತರವೂ ತನಿಖೆ ಪ್ರಗತಿಯಲ್ಲಿರುವಾಗ ಇಟಲಿಗೆ ಹಲವು ಬಾರಿ ಭೇಟಿ ನೀಡಿದ್ದರು. ತ್ಯಾಗಿಯವರ 2012ರ ಪ್ರಯಾಣ ಹೊರತಾಗಿ ಅವರು 2008 ಅಥವಾ 2009ರಲ್ಲಿ ಪ್ಲಾರೆನ್ಸ್, ವೆನಿಸ್ ಹಾಗೂ ಮಿಲಾನ್ ನಗರಗಳಿಗೆ ಭೇಟಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News