ಇಟಲಿಯು ಭಾರತದ ನ್ಯಾಯಾಂಗ ವ್ಯಾಪ್ತಿಯನ್ನು ಪ್ರಶ್ನಿಸಿದೆ: ಜೇಟ್ಲಿ

Update: 2016-05-03 18:18 GMT

ಹೊಸದಿಲ್ಲಿ, ಮೇ 3: ಇಟಲಿಯ ನ್ಯಾಯಾಲಯವು ಭಾರತದ ನ್ಯಾಯಾಂಗ ವ್ಯಾಪ್ತಿಗೆ ಸವಾಲು ಹಾಕಿದೆಯೆಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಂಗಳವಾರ ಹೇಳಿದ್ದಾರೆ. ಅವರು ಸಂಸತ್ತಿನಲ್ಲಿ ಇಟಲಿಯ ನಾವಿಕರ ಪ್ರಕರಣದ ಬಗ್ಗೆ ಮಾತನಾಡುತ್ತಿದ್ದರು.

  2012ರಲ್ಲಿ ಕೇರಳ ಸಮುದ್ರದಲ್ಲಿ ಇಬ್ಬರು ಭಾರತೀಯ ಮೀನುಗಾರರನ್ನು ಕೊಂದಿರುವ ಆರೋಪ ಹೊತ್ತಿರುವ ಇಟಲಿಯ ನಾವಿಕರ ಜಾಮೀನು ಶರ್ತಗಳನ್ನು ಸಡಿಲಗೊಳಿಸುವಂತೆ ಕೋರಲು ಭಾರತೀಯ ಸುಪ್ರೀಂಕೋರ್ಟನ್ನು ಸಮೀಪಿಸುವಂತೆ ಅಂತಾರಾಷ್ಟ್ರೀಯ ನ್ಯಾಯಾಧಿಕರಣವೊಂದು ಹೊಸದಿಲ್ಲಿ ಹಾಗೂ ರೋಮ್‌ಗಳಿಗೆ ಸೂಚಿಸಿದ ಒಂದು ದಿನದ ಬಳಿಕ ಜೇಟ್ಲಿಯವರ ಈ ಹೇಳಿಕೆ ಹೊರಟಿದೆ.
ಮಂಗಳವಾರ ಅಧಿಕೃತವಾಗಿ ಪ್ರಕಟಿಸಬೇಕಾದ ಆದೇಶವೊಂದರಲ್ಲಿ ಹೇಗ್‌ನಲ್ಲಿರುವ ವಿಶ್ವಸಂಸ್ಥೆಯ ಕಾಯಂ ಮಧ್ಯಸ್ಥಿಕೆ ನ್ಯಾಯಾಲಯವು, ವಿವಾದವನ್ನು ಪಂಚಾಯಿತಿಕೆಯ ಮೂಲಕ ಇತ್ಯರ್ಥಪಡಿಸಿಕೊಳ್ಳುವವರೆಗೆ ಸಾರ್ಜೆಂಟ್ ಸಾಲ್ವದೋರ್ ಗಿರೋನ್‌ಗೆ ಮನೆಗೆ ಹಿಂದಿರುಗಲು ಅವಕಾಶ ನೀಡಬೇಕೆಂದು ಹೇಳಿದೆ.
ಗಿರೋನ್ ಜಾಮೀನಿನಲ್ಲಿ ಹೊರಗಿದ್ದರೂ, ಪ್ರಯಾಣ ನಿರ್ಬಂಧದ ಕಾರಣ ದಿಲ್ಲಿಯ ಇಟಾಲಿಯನ್ ದೂತಾವಾಸದಲ್ಲೇ ಇದ್ದಾನೆ.
ಸೋಮವಾರ ಪ್ರಾಥಮಿಕವಾಗಿ ಇಟಲಿಯ ಆದೇಶವನ್ನು ತಪ್ಪಾಗಿ ವ್ಯಾಖ್ಯಾನಿಸುತ್ತದೆ ಎನ್ನುವ ಮೂಲಕ ಸರಕಾರಿ ಮೂಲಗಳು ಈ ವರದಿಯನ್ನು ನಿರಾಕರಿಸಿದ್ದವು. ಆದರೆ, ಬಳಿಕ ವಿದೇಶಾಂಗ ವಕ್ತಾರ ವಿಕಾಸ್ ಸ್ವರೂಪ್ ನ್ಯಾಯಾಲಯದ ಆದೇಶವನ್ನು ಖಚಿತಪಡಿಸಿದ್ದಾರೆ.
ಆರೋಪಿಗಳ ವಿರುದ್ಧ ಭಾರತವು ತಮ್ಮ ನ್ಯಾಯಾಂಗ ವ್ಯಾಪ್ತಿಯಲ್ಲ. ಇಟಲಿಯೇ ತಮ್ಮ ನ್ಯಾಯಾಂಗ ವ್ಯಾಪ್ತಿಯಾಗಿದೆಯೆಂಬುದು ಇಟಲಿ ಸರಕಾರದ ವಾದವಾಗಿದೆ. ಅದನ್ನು ನಿರ್ಧರಿಸುವ ಪಂಚಾಯತಿಕೆ ಪ್ರಕ್ರಿಯೆಗಳು ಮುಗಿಯುವವರೆಗೆ ಗಿರೋನ್‌ಗೆ ಇಟಲಿಗೆ ಹೋಗಲು ಅವಕಾಶ ನೀಡಬೇಕೆಂದು ನ್ಯಾಯಾಧಿಕರಣ ನಿರ್ಧರಿಸಿದೆಯೆಂದು ರೋಮ್‌ನ ವಿದೇಶಾಂಗ ಸಚಿವಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News