ಜುಲೈಗೆ ಸಾನಿಯಾ ಆತ್ಮಚರಿತ್ರೆ ಬಿಡುಗಡೆ
ಹೊಸದಿಲ್ಲಿ, ಮೇ 4: ಮಹಿಳೆಯರ ಡಬಲ್ಸ್ ರ್ಯಾಂಕಿಂಗ್‌ನಲ್ಲಿ ವಿಶ್ವದ ನಂ.1 ಆಟಗಾರ್ತಿಯಾಗಿರುವ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಈ ವರ್ಷದ ಜುಲೈನಲ್ಲಿ ತನ್ನ ಆತ್ಮಚರಿತ್ರೆಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಪುಸ್ತಕ ಪ್ರಕಾಶನದ ಹೊಣೆ ಹೊತ್ತಿರುವ ಹಾರ್ಪರ್ ಕಾಲಿನ್ಸ್ ತಿಳಿಸಿದೆ.
‘ಏಸ್ ಎಗೆಂಸ್ಟ್ ಆಡ್ಸ್’ ಶೀರ್ಷಿಕೆಯ ಪುಸ್ತಕವನ್ನು ಸಾನಿಯಾ ಹಾಗೂ ಆಕೆಯ ತಂದೆ ಇಮ್ರಾನ್ ಮಿರ್ಝಾ ಬರೆದಿದ್ದಾರೆ. ‘‘ಸಾನಿಯಾರ ಸಾಧನೆ ಅಮೋಘವಾದುದು. ಅವರ ಆತ್ಮಚರಿತ್ರೆ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಅವರ ಪುಸ್ತಕ ಪ್ರಕಾಶನದ ಜವಾಬ್ದಾರಿ ನಮಗೆ ಲಭಿಸಿದ್ದು ದೊಡ್ಡ ಗೌರವ’’ ಎಂದು ಹಾರ್ಪರ್ ಕಾಲಿನ್ಸ್‌ನ ಪ್ರಕಾಶಕ ಹಾಗೂ ಮುಖ್ಯ ಸಂಪಾದಕರಾದ ಕಾರ್ತಿಕ್ ವಿ.ಕೆ. ಹೇಳಿದ್ದಾರೆ.
ಭಾರತದ ಮುಂದಿನ ಪೀಳಿಗೆಯ ಟೆನಿಸ್ ಆಟಗಾರರಿಗೆ ಈ ಪುಸ್ತಕವು ಉಪಯುಕ್ತ ಮಾರ್ಗದರ್ಶನವಾಗುವ ವಿಶ್ವಾಸ ನನಗಿದೆ. ನನ್ನ ಜೀವನದ ಒಂದು ಘಟನೆಯು ಯುವ ಆಟಗಾರನಿಗೆ ಗ್ರಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲಲು ಸ್ಪೂರ್ತಿಯಾದರೆ ಅದು ನನಗೆ ದೊಡ್ಡ ಕೊಡುಗೆ ಎಂದು ಮಿರ್ಝಾ ಹೇಳಿದ್ದಾರೆ.