ಮೇ 5-7: ಪುತ್ತೂರು ಕರವಡ್ತ ವಲಿಯುಲ್ಲಾಹಿ ಉರೂಸ್
ಪುತ್ತೂರು, ಮೇ 4: ಪುತ್ತೂರಿನ ಬದ್ರಿಯಾ ಜುಮಾ ಮಸೀದಿಯಲ್ಲಿರುವ ಅಸೈಯ್ಯದ್ ಕರವಡ್ತ ವಲಿಯುಲ್ಲಾಹಿ ಉರೂಸ್ ಸಮಾರಂಭ ಮೇ 5ರಿಂದ 7ರ ತನಕ ನಡೆಯಲಿದೆ ಎಂದು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಕಾರ್ಯದರ್ಶಿ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ ತಿಳಿಸಿದ್ದಾರೆ.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮೇ 5ರಂದು ಪೂರ್ವಾಹ್ನ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಪಿ.ಬಿ. ಹಸನ್ ಹಾಜಿ ಧ್ವಜಾರೋಹಣ ನಡೆಸಲಿದ್ದಾರೆ. ಬಳಿಕ ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಅಹ್ಮದ್ ಪೂಕೋಯ ತಂಙಳ್ ಅವರು ಕೂಟು ಝಿಯಾರತ್ ನಡೆಸಲಿದ್ದಾರೆ. ರಾತ್ರಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಮಸ್ತ ಕೇಂದ್ರ ಮುಶಾವರದ ಉಪಾಧ್ಯಕ್ಷ ಎಂ.ಟಿ. ಅಬ್ದುಲ್ಲಾ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಯು. ಅಬ್ದುಲ್ಲಾ ಅಧ್ಯಕ್ಷತೆ ವಹಿಸಲಿದ್ದಾರೆ. ತ್ರಿಶೂರ್ ನಹ್‌ಜೂರ್ ರಶಾದ್ ಇಸ್ಲಾಮಿಕ್ ಕಾಲೇಜ್‌ನ ಪ್ರಾಂಶುಪಾಲ ಅನ್ವರ್ ಮುಹಿಯುದ್ದೀನ್ ಹುದವಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಮೇ 6ರಂದು ರಾತ್ರಿ ನಡೆಯುವ ಧಾರ್ಮಿಕ ಮತಪ್ರಸಂಗವನ್ನು ಸಮಸ್ತ ಕೇಂದ್ರ ಮುಶಾವರ ಕೋಶಾಧಿಕಾರಿ ಕಾಞಂಗಾಡ್ ಖಾಝಿ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಲಿದ್ದಾರೆ. ಸಮಸ್ತ ಕೇಂದ್ರ ಮುಶಾವರದ ಸದಸ್ಯ ಅಬ್ದುಲ್ ಜಬ್ಬಾರ್ ಉಸ್ತಾದ್ ಗೌರವ ಉಪಸ್ಥಿತರಿರುತ್ತಾರೆ. ಖಾಸಿಮ್ ದಾರಿಮಿ ವಯನಾಡ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಮೇ 7ರಂದು ಪೂರ್ವಾಹ್ನ ಉಲೆಮಾ ಉಮರಾ ಸಮಾವೇಶ ನಡೆಯಲಿದ್ದು, ಕುಂಬ್ರ ಕೆಐಸಿ ಅಧ್ಯಕ್ಷ ಕೆ.ಪಿ. ಅಹ್ಮದ್ ಹಾಜಿ ಉದ್ಘಾಟಿಸಲಿದ್ದಾರೆ. ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಎಸ್ ಇಬ್ರಾಹಿಂ ಕಮ್ಮಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಕೊಯ್ಯೂಡ್ ಪಿ.ಪಿ. ಉಮರ್ ಮುಸ್ಲಿಯಾರ್ ಮತ್ತು ಎಸ್.ಬಿ. ಮುಹಮ್ಮದ್ ದಾರಿಮಿ ಪುತ್ತೂರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಸಂಜೆ ಮಂಗಳೂರು ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಅಲೀ ತಂಙಲ್ ಕುಂಬೋಳ್, ಯಹ್ಯ ತಂಙಳ್ ಕಬಕ ಮತ್ತು ಶರಫುದ್ದೀನ್ ತಂಙಳ್ ನೇತೃತ್ವದಲ್ಲಿ ಝಿಕ್‌ರ್ ಮಜ್ಲಿಸ್ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಯು. ಅಬ್ದುಲ್ಲಾ, ಉಪಾಧ್ಯಕ್ಷ ಯಾಕೂಬ್ ದರ್ಬೆ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರಾದ ಪಿ.ಬಿ. ಹಸನ್ ಹಾಜಿ ಮತ್ತು ನ್ಯಾಯವಾದಿ ನೂರುದ್ದೀನ್ ಸಾಲ್ಮರ ಉಪಸ್ಥಿತರಿದ್ದರು.