×
Ad

ರಿಕ್ಷಾ ಚಾಲಕರ ಸಹಕಾರಿ ಸಂಘ ‘ಕುಡ್ಲ ಸೌಹಾರ್ದ ಸಹಕಾರಿ ನಿಯಮಿತ’ ಉದ್ಘಾಟನೆ

Update: 2016-05-04 19:11 IST

ಮಂಗಳೂರು,ಮೇ.4: ರಿಕ್ಷಾ ಚಾಲಕರ ಸಹಕಾರಿ ಸಂಘ ಕುಡ್ಲ ಸೌಹಾರ್ದ ಸಹಕಾರಿ ನಿಯಮಿತವನ್ನು ಇಂದು ನಗರದ ಪೊಲೀಸ್ ಲೇನ್‌ನ ನಾಸಿಕ್ ಬಂಗೇರ ಸಭಾಭವನದಲ್ಲಿ ಟೆಲಿಮ್ಯಾಟ್ರಿಕ್ಸ್ ಫಾರ್ ಯು ಬೆಂಗಳೂರು ಇದರ ಆಡಳಿತ ನಿರ್ದೇಶಕ ಪ್ರತಾಪ್ ಹೆಗ್ಡೆ ಉದ್ಘಾಟಿಸಿದರು.

 ಈ ಸಂದರ್ಭ ಮಾತನಾಡಿದ ಅವರು, ರಿಕ್ಷಾ ಚಾಲಕರು ಸಹಕಾರಿ ಸಂಘವನ್ನು ಮಾಡಿಕೊಂಡಿರುವುದು ದೇಶದಲ್ಲೇ ಪ್ರಥಮ ಪ್ರಯೋಗವಾಗಿದೆ. ಕೇವಲ ಆರ್ಥಿಕ ಲಾಭವನ್ನು ನಿರೀಕ್ಷಿಸದೆ ಸಹಕಾರಿ ಸಂಘದ ಆರ್ಥಿಕ ಮಟ್ಟವನ್ನು ಹೆಚ್ಚಿಸಲು ರಿಕ್ಷಾ ಚಾಲಕರು ಪ್ರಯತ್ನ ಮಾಡಬೇಕು ಎಂದು ಹೇಳಿದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಡ್ಲ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಪ್ರಕಾಶ್ ಬಿ.ಎನ್. ವಹಿಸಿದ್ದರು.

 ಕಾರ್ಯಕ್ರಮದಲ್ಲಿ ಕುಡ್ಲ ಸೌಹಾರ್ದ ಸಹಕಾರಿ ಸಂಘದ ಲಾಂಛನವನ್ನು ಅನಾವರಣಗೊಳಿಸಲಾಯಿತು.

 ಕಾರ್ಯಕ್ರಮದಲ್ಲಿ ರಿಕ್ಷಾ ಚಾಲಕ ಸಂಘ(ಎಚ್‌ಎಂಎಸ್)ದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ತಲೆಹೊರೆ ಕಾರ್ಮಿಕ ಸಂಘದ ಮುಖಂಡ ವಿಲ್ಲಿ ವಿಲ್ಸನ್, ಜನಶಕ್ತಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ದೇವದಾಸ್ ಎಂ, ಸಾಮಾಜಿಕ ಕಾರ್ಯಕರ್ತ ಯು.ಮೋಹನ್ ಚಂದ್ರ, ಆಟೊರಿಕ್ಷಾ ಚಾಲಕರ ಸಂಘದ ಮುಖಂಡ ಶೇಖರ್ ದೇರಳಕಟ್ಟೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News