×
Ad

ಕರ್ನಾಟಕದಲ್ಲಿ ಹೆಚ್ಚುವರಿ ಪಾಸ್‌ಪೋರ್ಟ್ ಸೇವಾಕೇಂದ್ರಗಳ ಸ್ಥಾಪನೆಗೆ ಐವನ್ ಡಿಸೋಜ ಮನವಿ

Update: 2016-05-04 19:42 IST

ಮಂಗಳೂರು, ಮೇ.4: ಕರ್ನಾಟಕ ರಾಜ್ಯದ ಮಂಗಳೂರು, ಹುಬ್ಬಳ್ಳಿ , ಮೈಸೂರಿನಲ್ಲಿ ಪ್ರಾದೇಶಿಕ ಕೇಂದ್ರಗಳಲ್ಲಿ ಪಾಸ್‌ಪೋರ್ಟ್ ಕಚೇರಿಗಳನ್ನು ತೆರೆಯಲು ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಅಧಿಕಾರಿಯ ಶಿಫಾರಸು ಜಾರಿಗೆ ತರುವಂತೆ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದ ನಿಯೋಗ ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ ಭೇಟಿ ನೀಡಿ ಮನವಿ ಸಲ್ಲಿಸಿತು.

ರಾಜ್ಯದಲ್ಲಿ ವರ್ಷವೊಂದಕ್ಕೆ ಸುಮಾರು 6.5 ಲಕ್ಷ ಪಾಸ್‌ಪೋರ್ಟ್‌ಗಳನ್ನು ನೀಡಲಾಗುತ್ತಿದ್ದು, ದೇಶದಲ್ಲಿ 3ನೆ ಸ್ಥಾವನ್ನು ಹೊಂದಿದೆ. ಪ್ರಥಮ ಸ್ಥಾನ ಉತ್ತರ ಪ್ರದೇಶದ ಲಕ್ನೊ, ದ್ವಿತೀಯ ಸ್ಥಾನ ಆಂಧ್ರಪ್ರದೇಶ, ತೃತೀಯ ಸ್ಥಾನ ಕರ್ನಾಟಕಕ್ಕೆ ಇದ್ದು, ಕೇವಲ ಒಂದೇ ಪಾಸ್‌ಪೋರ್ಟ್ ಕಚೇರಿ ಇರುವುದರಿಂದ ಪಾಸ್‌ಪೋರ್ಟ್ ಅರ್ಜಿದಾರರಿಗೆ ತೊಂದರೆ ಉಂಟಾಗಿದೆ. ಕೇರಳದಲ್ಲಿ ನಾಲ್ಕು, ಆಂಧ್ರದಲ್ಲಿ ನಾಲ್ಕು ಮತ್ತು ಮುಂಬೈನಲ್ಲಿ ಐದು ಪಾಸ್‌ಪೋರ್ಟ್ ಕಚೇರಿಯಿದೆ. ಕರ್ನಾಟಕದಲ್ಲಿ ಕನಿಷ್ಠ 3 ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಸ್ಥಾಪಿಸಬೇಕೆಂದು ಈಗಾಗಲೇ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ಪಿ.ಎಸ್.ಕಾರ್ತಿಗೇಯನ್ ಶಿಫಾರಸ್ಸು ಮಾಡಿದ್ದಾರೆ. ಆದರೂ ಕೇಂದ್ರ ವಿದೇಶಾಂಗ ಸಚಿವರು ಯಾವುದೇ ತಿರ್ಮಾನ ಕೈಗೊಳ್ಳದೇ ಇರುವುದರಿಂದ ರಾಜ್ಯದಲ್ಲಿ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದವರಿಗೆ ಸಮಸ್ಯೆಗಳಾಗಿವೆ.

ಜಿಲ್ಲಾ ಕೇಂದ್ರಗಳಿಂದ ಪ್ರಾದೇಶಿಕ ಕಚೇರಿಗಳಿಗೆ ಸುಮಾರು 750 ಕಿ.ಮೀ. ಪ್ರಯಾಣ ಮಾಡುವುದು ಅನಿವಾರ್ಯವಾಗಿದೆ. ಶೇ.15 ಅರ್ಜಿದಾರರು ತಮ್ಮ ಸಮಸ್ಯೆಗಳಿಗಾಗಿ ಕೇಂದ್ರ ಕಚೇರಿಗೆ ಆಗಮಿಸಿಬೇಕಾಗಿದ್ದು, ಕನಿಷ್ಠ 600 ರಿಂದ 700 ಕಿ.ಮೀ ದೂರ ಬರಬೇಕಾಗಿದೆ. ಈ ಸಮಸ್ಯೆಗಳನ್ನು ನಿಭಾಯಿಸಲು ಕನಿಷ್ಠ ರಾಜ್ಯದಲ್ಲಿ 3 ಹೆಚ್ಚು ಪ್ರಾದೇಶಿಕ ಕಚೇರಿಯನ್ನು ಪ್ರಾರಂಭಿಸಲು ಕ್ರಮಕೈಗೊಳ್ಳಬೇಕೆಂದು ಪ್ರಾದೇಶಿಕ ಕಚೇರಿಗೆ ಭೇಟಿ ಮಾಡಿ ಅವರ ಮೂಲಕ ಕೇಂದ್ರ ಸರಕಾರಕ್ಕೆ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ರಿಗೆ ಮನವಿ ನೀಡಲಾಯಿತು.

ರಾಜ್ಯದ ಪ್ರಸ್ತುತ ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ಬಗ್ಗೆ ಹೆಚ್ಚುವರಿಯಾಗಿ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಮತ್ತು ಸೇವಾ ಕಛೇರಿಗಳು ಕಾರ್ಯ ನಿರ್ವಹಣೆ ತೃಪ್ತಿಕರವಾಗಿಲ್ಲ ಎಂದು ಅರ್ಜಿದಾರರು ಆರೋಪಿಸುತ್ತಿದ್ದಾರೆ. ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಹೆಚ್ಚುವರಿ ಅಧಿಕಾರಿಗಳನ್ನು ನೇಮಿಸಬೇಕೆಂದು ಪಾಸ್‌ಪೋರ್ಟ್ ವೆರಿಫಿಕೇಷನ್ ಸರ್ಟಿಪಿಕೇಟ್ ಬಗ್ಗೆ ಇರುವ ಗೊಂದಲವನ್ನು ನಿವಾರಿಸಲು ತ್ವರಿತ ಕ್ರಮಕೈಗೊಳ್ಳಬೇಕೆಂದು, ಮಧ್ಯವರ್ತಿಗಳನ್ನು ದೂರ ಇಡಲು ಕ್ರಮಕೈಗೊಳ್ಳಕೆಂದು ಪಾಸ್‌ಪೋರ್ಟ್ ಅಧಿಕಾರಿಯವರಲ್ಲಿ ಒತ್ತಾಯಿಸಲಾಯಿತು.

ಮಂಗಳೂರಿನಲ್ಲಿ ಪಾಸ್‌ಪೋರ್ಟ್ ಕಚೇರಿಯನ್ನು ಜಿಲ್ಲಾ ಕಚೇರಿಯ ಆವರಣಕ್ಕೆ ವರ್ಗಾಯಿಸಬೇಕೆಂದು, ಪ್ರಸ್ತುತ ಕಚೇರಿಯು ರಸ್ತೆ ಬದಿಯಲ್ಲಿದ್ದು, ಅಪಘಾತಕ್ಕೆ ಆಹ್ವಾನ ನೀಡುವಂತಿದೆ ಎಂದು ಅಧಿಕಾರಿಯ ಗಮನಕ್ಕೆ ತರಲಾಯಿತು. ರಾಜ್ಯದಲ್ಲಿ ಹೆಚ್ಚುವರಿ ಪಾಸ್‌ಪೋರ್ಟ್‌ಗಳನ್ನು ನೀಡುವಂತೆ ಕ್ರಮಕೈಗೊಳ್ಳಬೇಕು .ಈ ವರ್ಷ ಈಗಾಗಲೇ 2 ಲಕ್ಷ 80 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ವಿತರಣೆ ವಿಳಂಬವಾಗುತ್ತಿದೆ ಎಂದು ಅಧಿಕಾರಿಯವರ ಗಮನಕ್ಕೆ ತರಲಾಯಿತು.

ಈ ಸಂದರ್ಭ ಏರಿಕ್ ಡಿಸಿಲ್ವಾ, ರಿಚರ್ಡ್ ಸಿಖ್ವರ್,ಯೂನಸ್ ಜೋನ್ಸ್ ಮತು ಜೋನ್ ಸಾಮಿಯಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News