×
Ad

ಮೀನುಗಾರರಿಗೆ ಬಯೊಮೆಟ್ರಿಕ್ ಕಾರ್ಡ್ ಕಡ್ಡಾಯ

Update: 2016-05-04 19:48 IST

ಮಂಗಳೂರು, ಮೇ 4: ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮೀನುಗಾರಿಕೆಗೆ ತೆರಳುವ ದೋಣಿಗಳಲ್ಲಿ ಮೀನುಗಾರರು ಬಯೋಮೆಟ್ರಿಕ್ ಕಾರ್ಡ್‌ನ್ನು ಹೊಂದುವುದು ಕಡ್ಡಾಯವಾಗಿರುತ್ತದೆ.

ಬಯೋಮೆಟ್ರಿಕ್ ಕಾರ್ಡ್‌ನ್ನು ಹೊಂದಲು ಕೊನೆಯ ಅವಕಾಶವಾಗಿ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿರುವ ಕರಾವಳಿ ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ಬಿಇಎಲ್ ಸಂಸ್ಥೆಯು ಮೇ ಮತ್ತು ಜೂನ್ ತಿಂಗಳಲ್ಲಿ ಹಮ್ಮಿಕೊಂಡಿದೆ.

ಎಲ್ಲ ಮೀನುಗಾರಿಕೆ ದೋಣಿ ಮಾಲಕರು ತಮ್ಮ ದೋಣಿಗಳಲ್ಲಿ ಕೆಲಸ ಮಾಡುವ ಮೀನುಗಾರರಿಗೆ ಕಡ್ಡಾಯವಾಗಿ ಬಯೋಮೆಟ್ರಿಕ್ ಕಾರ್ಡ್‌ನ್ನು ಪಡೆಯಲು ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಬಯೊಮೆಟ್ರಿಕ್ ಕಾರ್ಡ್ ಹೊಂದುವುದು ಕಡ್ಡಾಯವಾಗಿರುವುದರಿಂದ ಈ ಕ್ಯಾಂಪ್‌ನ ಪ್ರಯೋಜನ ಪಡೆಯುವಂತೆ ಮತ್ತು ಕ್ಯಾಂಪ್‌ನ ದಿನಾಂಕವನ್ನು ಮುಂದಕ್ಕೆ ಪ್ರಕಟಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News