×
Ad

ಉಳ್ಳಾಲದಲ್ಲಿ ಹಮ್ಮಿಕೊಂಡಿದ್ದ ‘ಶಾಂತಿಗಾಗಿ ಪಾದಯಾತ್ರೆ’ ಮುಂದೂಡಿಕೆ

Update: 2016-05-04 19:52 IST

ಉಳ್ಳಾಲ, ಮೇ 4: ಮಂಗಳೂರು ನಗರ ಪೊಲೀಸ್ ಇಲಾಖೆಯ ಆಶ್ರಯದಲ್ಲಿ ಮೇ 5ರಂದು ಉಳ್ಳಾಲ ನಗರಾದ್ಯಂತ ನಡೆಸಲುದ್ದೇಶಿಸಲಾಗಿದ್ದ ಶಾಂತಿಗಾಗಿ ಪಾದಯಾತ್ರೆಯನ್ನು ಕಾರಣಾಂತರದಿಂದ ಮುಂದೂಡಲಾಗಿದೆ.

ಕಳೆದ ಹಲವಾರು ದಿನಗಳಿಂದ ಉಳ್ಳಾಲದಲ್ಲಿ ನಿರಂತರವಾಗಿ ನಡೆಯುತ್ತಿರುವ ಮತೀಯ ಸಂಘರ್ಷಗಳನ್ನು ತಹಬದಿಗೆ ತರಲು ಮಂಗಳವಾರ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಸಿಪಿ ಕಲ್ಯಾಣ್ ಶೆಟ್ಟಿ ನೇತೃತ್ವದಲ್ಲಿ ಎಲ್ಲಾ ಧರ್ಮದ ಮುಖಂಡರು ಹಾಗೂ ರಾಜಕೀಯ ಮುಖಂಡರುಗಳ ಸಮಕ್ಷಮದಲ್ಲಿ ಶಾಂತಿ ಸಭೆ ನಡೆದಿತ್ತು.

ಸಭೆಯಲ್ಲಿ ಮೇ 5ರಂದು ಸಂಜೆ 3 ಗಂಟೆಗೆ ಉಳ್ಳಾಲದಾದ್ಯಂತ ಮಂಗಳೂರು ನಗರ ಪೊಲೀಸ್ ನೇತೃತ್ವದಲ್ಲಿ ಶಾಂತಿಗಾಗಿ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಪಾದಯಾತ್ರೆಯನ್ನು ಮುಂದೂಡುವಂತೆ ಪೊಲೀಸ್ ಆಯಕ್ತರು ಬುಧವಾರ ಉಳ್ಳಾಲ ಠಾಣಾಧಿಕಾರಿಗೆ ಆದೇಶಿಸಿದ್ದಾರೆಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News