ಕಾರು-ಮೊಪೆಡ್ ಢಿಕ್ಕಿ: ಗಾಯಾಳು ಮೃತ್ಯು
Update: 2016-05-04 20:09 IST
ಪುತ್ತೂರು, ಮೇ 4: ಮೂರು ದಿನಗಳ ಹಿಂದೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಕಾವು ಸಮೀಪ ಕಾರು ಮತ್ತು ಮೊಪೆಡ್ ನಡುವೆ ಢಿಕ್ಕಿ ಸಂಭವಿಸಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದ ಮೊಪೆಡ್ ಸವಾರ ಚಿಕಿತ್ಸೆ ಪಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ.
ಮಡಿಕೇರಿ ನಿವಾಸಿ ದೇವಯ್ಯ (19) ಮೃತಪಟ್ಟ ವ್ಯಕ್ತಿ. ದೇವಯ್ಯ ತನ್ನ ಸ್ನೇಹಿತನೊಂದಿಗೆ ಮೇ 1ರಂದು ಮಡಿಕೇರಿಯಿಂದ ಮಂಗಳೂರಿಗೆ ಮೊಪೆಡ್‌ನಲ್ಲಿ ಆಗಮಿಸುತ್ತಿದ್ದ ವೇಳೆ ಕಾರು ಮತ್ತು ಮೊಪೆಡ್ ನಡುವೆ ಢಿಕ್ಕಿ ಸಂಭವಿಸಿತ್ತು. ಈ ಸಂದರ್ಭ ರಸ್ತೆಗೆಸೆಯಲ್ಪಟ್ಟ ದೇವಯ್ಯರ ತಲೆಗೆ ಗಂಭೀರ ಗಾಯವಾಗಿತ್ತು. ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.