ಮಹಿಳಾ ಹಾಕಿ ಟೆಸ್ಟ್ ಸರಣಿ: ಬ್ರಿಟನ್‌ಗೆ ಶರಣಾದ ಭಾರತ

Update: 2016-05-04 17:30 GMT

ಲಂಡನ್, ಮೇ 4: ಭಾರತೀಯ ಮಹಿಳಾ ಹಾಕಿ ತಂಡ ಗ್ರೇಟ್ ಬ್ರಿಟನ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು 0-2 ಅಂತರದಿಂದ ಸೋತಿದೆ.

ಬಿರುಸಿನ ಆರಂಭ ಪಡೆದಿದ್ದ ಭಾರತ ಏಳನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಪಡೆದಿತ್ತು. ಆದರೆ, ಅನುರಾಧ ಈ ಅವಕಾಶವನ್ನು ಕೈಚೆಲ್ಲಿದರು. ಆರಂಭದಲ್ಲಿ ಎರಡೂ ತಂಡಗಳು ಪೈಪೋಟಿ ನಡೆಸಿದ ಕಾರಣ ಮೊದಲಾರ್ಧ ಗೋಲುಗಳಿಲ್ಲದೆ ಅಂತ್ಯ ಕಂಡಿತು.

38ನೆ ನಿಮಿಷದಲ್ಲಿ ಎಲ್ಲಿ ರಾಯರ್ ಬ್ರಿಟನ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟರು. ಅಂತಿಮ ಅವಧಿಯಲ್ಲಿ ಭಾರತದ ಮಹಿಳೆಯರು ಗೋಲು ಬಾರಿಸಲು ಯತ್ನಿಸಿದ್ದರು. ಆದರೆ, ಎಲ್ಲಿ ರಾಯರ್ ಪೆನಾಲ್ಟಿ ಕಾರ್ನರ್‌ನ ಮೂಲಕ ಎರಡನೆ ಗೋಲು ಬಾರಿಸಿದರು.ಭಾರತ ಮಹಿಳಾ ತಂಡ 0-2 ಅಂತರದಿಂದ ಸೋತಿದ್ದರೂ ಸಂಘಟಿತ ಪ್ರದರ್ಶನದಿಂದ ಗಮನ ಸೆಳೆಯಿತು.

ಭಾರತ ತಂಡ ಮೇ 5 ರಂದು ಗ್ರೇಟ್ ಬ್ರಿಟನ್ ವಿರುದ್ಧ ಟೆಸ್ಟ್ ಸರಣಿಯ ಎರಡನೆ ಪಂದ್ಯವನ್ನು ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News