ಮೇ ಅಂತ್ಯಕ್ಕೆ ಮುಂಗಾರು
Update: 2016-05-04 23:33 IST
ಹೊಸದಿಲ್ಲಿ,ಮೇ 4: ಮುಂಗಾರು ಮಳೆಯು ಮೇ ಅಂತ್ಯದಲ್ಲಿ ಅಥವಾ ಜೂನ್ ಆರಂಭದಲ್ಲಿ ಕೇರಳವನ್ನು ಪ್ರವೇಶಿಸುವ ನಿರೀಕ್ಷೆಯಿದೆ ಮತ್ತು ವಿಧ್ಯುಕ್ತ ಹವಾಮಾನ ಮುನ್ಸೂಚನೆಯನ್ನು ಮೇ 15ರಂದು ಹೊರಡಿಸಬಹುದಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ ಅವರು ಬುಧವಾರ ಲೋಕಸಭೆಯಲ್ಲಿ ತಿಳಿಸಿದರು.
ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಸೇರಿದಂತೆ ಹಲವಾರು ಹವಾಮಾನ ಮುನ್ಸೂಚನೆ ಸಂಸ್ಥೆಗಳು ಈ ವರ್ಷ ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುತ್ತದೆ ಎಂದು ಭವಿಷ್ಯ ನುಡಿದಿವೆ ಎಂದರು.
ಒಟ್ಟಾರೆಯಾಗಿ ಐಎಂಡಿಯ ಹವಾಮಾನ ಮುನ್ಸೂಚನೆಯನ್ನು ನೀಡುವ ಕೌಶಲವು ವಿಶ್ವದ ಇತರ ರಾಷ್ಟ್ರಗಳಿಗಿಂತ ಉತ್ತಮವಾಗಿದೆ ಎಂದ ಅವರು, ಐಎಂಡಿಯ ಅಂದಾಜಿನಂತೆ 2016ರಲ್ಲಿ ದೀರ್ಘಾವಧಿಯ ಸರಾಸರಿಯ ಶೇ.106ರಷ್ಟು ಮಳೆ ಬೀಳಲಿದ್ದು,ಇದರಲ್ಲಿ ಶೇ.5ರಷ್ಟು ವ್ಯತ್ಯಾಸವಾಗಬಹುದು ಎಂದರು.