ಅರುಣಾಚಲ: ಅಮೆರಿಕ ಹೇಳಿಕೆಗೆ ಚೀನಾ ಆಕ್ಷೇಪ

Update: 2016-05-04 18:09 GMT

ಬೀಜಿಂಗ್, ಮೇ 4: ಅರುಣಾಚಲ ಪ್ರದೇಶವು ಭಾರತದ ಅವಿಚ್ಛಿನ್ನ ಭಾಗವಾಗಿದೆ ಎಂದು ಕೋಲ್ಕತಾದಲ್ಲಿ ಅಮೆರಿಕದ ಕಾನ್ಸುಲ್ ಜನರಲ್ ಆಗಿರುವ ಕ್ರೇಗ್ ಎಲ್.ಹಾಲ್ ಅವರ ಹೇಳಿಕೆಗೆ ಬುಧವಾರ ಆಕ್ಷೇಪವನ್ನು ವ್ಯಕ್ತಪಡಿಸಿರುವ ಚೀನಾ, ಭಾರತ-ಚೀನಾ ಗಡಿ ವಿವಾದದಲ್ಲಿ ಯಾವುದೇ ‘ಬೇಜವಾಬ್ದಾರಿ’ ಮೂರನೇ ರಾಷ್ಟ್ರದ ಹಸ್ತಕ್ಷೇಪವು ವಿಷಯವನ್ನು ಇನ್ನಷ್ಟು ‘ಜಟಿಲ’ಗೊಳಿಸುತ್ತದೆ ಎಂದು ಹೇಳಿದೆ.

ಚೀನಾ ಸರಕಾರವು ವರದಿಯನ್ನು ಗಮನಿಸಿದೆ ಮತ್ತು ಅದರ ದೃಢೀಕರಣ ಮತ್ತು ಸ್ಪಷ್ಟೀಕರಣಕ್ಕಾಗಿ ಅಮೆರಿಕವನ್ನು ಕೋರಲಿದೆ ಎಂದು ಸುದ್ದಿಸಂಸ್ಥೆಯ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಚೀನಾದ ವಿದೇಶಾಂಗ ಸಚಿವಾಲಯವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News